Header Ads
Header Ads
Breaking News

ಮಂಗಳೂರಿನಲ್ಲಿ ಸೆಪ್ಟಂಬರ್ 30ರಿಂದ ದಿ ಶ್ಯಾಡೋ ಫ್ಯಾಶನ್ ಪ್ರಸ್ತುತಪಡಿಸುವ ಸೌಂದರ್ಯ ಸ್ಪರ್ಧೆ

ಮಂಗಳೂರಿನ ಫ್ಯಾಷನ್ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ದಿ ಶ್ಯಾಡೋ ಫ್ಯಾಶನ್ ಪ್ರಸ್ತುತಪಡಿಸುವ ಸೌಂದರ್ಯ ಸ್ಪರ್ಧೆ ಮಿಸ್ಟರ್ ಮತ್ತು ಮಿಸ್ಸ್ ಅಲ್ಫಾ ಇಂಡಿಯಾ 2019 ಮಿಸ್ಸ್ ಆಲ್ಫಾ ಸುಪರ್ ನ್ಯಾಷನಲ್ 2019 ಸೆಪ್ಟಂಬರ್ 30ರಿಂದ ಮಂಗಳೂರಿನಲ್ಲಿ ಪ್ರಾರಂಭವಾಗಲಿದೆ ಎಂದು ರೋನಾಲ್ಡ್ ಡಿಸೋಜಾ ಹೇಳಿದರು.

ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸ್ಪರ್ಧೆಗೆ ಭಾರತದ ವಿವಿಧ ರಾಜ್ಯಗಳ ಪ್ರತಿಷ್ಠಿತ ಕಾಲೇಜುಗಳಲ್ಲಿ ಜುಲೈ ಮೊದಲ ವಾರದಿಂದ ಆಡಿಶನ್ ಪ್ರಾರಂಭವಾಗುವುದು. ಭಾರತದ ವಿವಿಧ ರಾಜ್ಯಗಳ 140 ಸ್ಪರ್ಧಿಗಳಿಗೆ ಒಂದು ರೆಸಾರ್ಟ್‌ನಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾದರಿಗಳು 6 ದಿನಗಳವರೆಗೆ ತರಬೇತಿ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಶಿಪಾಲಿ ಸಲ್ದಾನಾ, ಶಿಲ್ಪಾ ಶೆಟ್ಟಿ, ನವ್ಯ ಶ್ರೀ ರೈ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *