Header Ads
Header Ads
Breaking News

ಅಕ್ಟೋಬರ್ 18ರಂದು ದುಬಾಯಿಯಲ್ಲಿ ಪಟ್ಲ ಸಂಭ್ರಮ-2019

ದುಬಾಯಿ ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ ಅಕ್ಟೋಬರ್ 18ರಂದು ಹಮ್ಮಿಕೊಂಡ ಪಟ್ಲ ಸಂಭ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ಈ ಸಮಾರಂಭದಲ್ಲಿ ಕನ್ನಡ ಚಲನಚಿತ್ರ ರಂಗದ ಬಹು ಬೇಡಿಕೆಯ ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ದುಬಾಯಿಯ ಪ್ರಖ್ಯಾತ ವಾಣಿಜ್ಯೋದ್ಯಮಿಗಳಾದ ಶ್ರೀ ರೊನಾಲ್ಡ್ ಕೊಲಾಸೊ ಮತ್ತು ಡಾ.ಬಿ.ಆರ್. ಶೆಟ್ಟಿಯವರು ಭಾಗವಹಿಸಲಿದ್ದಾರೆ.

ಸಮಯಕ್ಕೆ ಸರಿಯಾಗಿ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಸರಿಯಾಗಿ 3.30 ಗಂಟೆಗೆ ಪ್ರವೇಶ ಧ್ವಾರ ತೆರೆಯಲಿದೆ. ಕಾರ್ಯಕ್ರವಮದಂಗವಾಗಿ ನಡೆವ ಹಾಸ್ಯ ವೈಭವದಲ್ಲಿ ಶ್ರೀಯುತ ದಿನೇಶ್ ಶೆಟ್ಟಿಗಾರ್ ಕೋಡಪದವು ಮತ್ತು ಚಲನಚಿತ್ರ ನಟ ಅರವಿಂದ ಬೋಳಾರ್ ತಮ್ಮ ಹಾಸ್ಯ ರಸಾಯನದಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದ್ದಾರೆ.
ಗಾನ ಗಂಧರ್ವ ಯಕ್ಷ ಧ್ರುವ ಪಟ್ಲ ಸತೀಶ ಶೆಟ್ಟರ ಸಾರಥ್ಯ ದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು, ನಮ್ಮ ತಾಯ್ನಾಡಿನ ಗಣ್ಯ ಅತಿಥಿ ಕಲಾವಿದರೆಲ್ಲ ಈಗಾಗಲೇ ದುಬಾಯಿ ತಲುಪಿದ್ದಾರೆ. ಸುಂಕದಕಟ್ಟೆ ಮೇಳದ ಪ್ರಧಾನ ಭಾಗವತರಾದ ಶ್ರೀಯುತ ಕರುಣಾಕರ ಶೆಟ್ಟಿಗಾರ್ ಕಾಶೀಪಟ್ಣ ಭಾಗವತಿಕೆಯಲ್ಲಿ , ಶ್ರೀಯುತ ಪದ್ಮನಾಭ ಉಪಾಧ್ಯಾಯರು ಮತ್ತು ಶ್ರೀಯುತ ದಯಾನಂದ ಶೆಟ್ಟಿಗಾರ್ ಚೆಂಡೆ-ಮದ್ದಳೆಯಲ್ಲಿ ತಮ್ಮ ಪ್ರೌಢಿಮೆಯನ್ನು ಮೆರೆಸಲಿದ್ದಾರೆ ಅತಿಥಿ ಕಲಾವಿದರಾದ ಶ್ರೀಯುತ ದಿನೇಶ ಶೆಟ್ಟಿಗಾರ್ ಕೋಡಪದವು ಮುರಳೀಧರ ಶೆಟ್ಟಿಗಾರ್ ಕನ್ನಡಿಕಟ್ಟೆ ಶ್ರೀಯುತ ಸದಾಶಿವ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಸಚಿನ್ ಅಮೀನ್ ಉದ್ಯಾವರ ಮೊದಲಾರವರು ಪ್ರಮುಖ ಪಾತ್ರದಲ್ಲಿ ನಿಮ್ಮನ್ನೆಲ್ಲಾ ರಂಜಿಸಲಿದ್ದಾರೆ. ಪ್ರಸಾಧನ ಕಲಾವಿದರಾಗಿ, ಶ್ರೀಯುತ ಗಂಗಾಧರ ಡಿ.ಶೆಟ್ಟಿಗಾರ್ ಮತ್ತು ಶ್ರೀಯುತ ನಿತಿನ್ ಕುಂಪಲ ಪ್ರಸಾಧನ ಕಲಾವಿದರಾಗಿ ಬಾಗವಹಿಸಲಿದ್ದಾರೆ.
ನೂತನ ವೇಷಭೂಷಣ- ರಂಗಸ್ಥಳಗಳು ಸಿದ್ಧವಾಗಿವೆ. ಆಕರ್ಷಕ ವಿದ್ಯುದ್ದೀಪಾಲಂಕಾರ- ಪುಪ್ಪಲಂಕಾರಗಳಿಂದ ಉಯ್ಯಾಲೆ, ದೃಶ್ಯಾವಳಿಗಳು ಪ್ರೇಕ್ಷಕರಕಣ್ಮನತಣಿಸಲಿವೆ. ದುಬಾಯಿ ಯಕ್ಷಗಾನ ತರಗತಿಯ ಸಹಕಾರ-ಸಹಬಾಗಿತ್ವದೊಂದಿಗೆ ನಡೆಯಲಿರುವ ಈ ಪಾವನ-ಪುಣ್ಯಯಕ್ಷಗಾನಕಥಾನಕ ಪ್ರದರ್ಶನಮಹಿಷಮರ್ಧಿನಿ ಜಗಜ್ಜನನಿದುಬಾಯಿ ಯಕ್ಷಪ್ರಿಯರ ಮನ ತಣಿಸಲಿದೆ. ಸರಿ ಸುಮಾರು ೫೦ ಕ್ಕೂ ಮಿಕ್ಕಿದ ಸ್ಥಳೀಯ ಹಿಮ್ಮೇಳ-ಮುಮ್ಮೇಳ ಕಲಾವಿದರು ಸೇರಿ ಸರಿಯಾಗಿಒಟ್ಟು ೮೫ ಪಾತ್ರಗಳನ್ನು ರಂಗದಲ್ಲಿ ನಿಮ್ಮ ಮುಂದೆ ಪ್ರದರ್ಶಿಸಲಿದ್ದಾರೆ.. ಅದ್ದೂರಿಯ ಈ ಪ್ರದರ್ಶನದಲ್ಲಿ ಭಾಗವಹಿಸಿ ತನು-ಮನ- ಧನಗಳ ಸಹಕಾರ ನೀಡಬೇಕೆಂದು, ಸಂಘಟಕ- ಸಂಯೋಜಕ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಘಟಕಅಧ್ಯಕ್ಷರಾದ ಶ್ರೀಯುತ ಸರ್ಮೋತ್ತಮ ಶೆಟ್ಟಿಅಬುದಾಭಿ ಮತ್ತು ಕಾರ್ಯದರ್ಶಿ ಶ್ರೀಯುತ ವಿಠಲ ಶೆಟ್ಟಿಯವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *