Header Ads
Header Ads
Breaking News

ದುಬೈಯ ಇಂಡಿಯನ್ ಹೈಸ್ಕೂಲ್‌ನ ಶೇಖ್ ರಶೀದ್ ಅಡಿಟೋರಿಯಂನಲ್ಲಿ ಬಿಲ್ಲವ ಫ್ಯಾಮಿಲಿ ಸಂಭ್ರಮ-2019

ಬಿಲ್ಲವ ಫ್ಯಾಮಿಲಿ ದುಬೈ ವಾರ್ಷಿಕೋತ್ಸವದ ಅಂಗವಾಗಿ ಬಿಲ್ಲವ ಫ್ಯಾಮಿಲಿ ಸಂಭ್ರಮ-2019 ಕಾರ್ಯಕ್ರಮವು ಅಕ್ಟೋಬರ್ ೨೫ರ ಶುಕ್ರವಾರದಂದು ದುಬೈಯ ಇಂಡಿಯನ್ ಹೈಸ್ಕೂಲ್‌ನ ಶೇಖ್ ರಶೀದ್ ಅಡಿಟೋರಿಯಂನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಪ್ರೆಶಿಯಸ್ ಪಾರ್ಟಿಸ್ ಮತ್ತು ಎಂಟಟೈನ್‌ಮೆಂಟ್ ಸರ್ವೀಸಸ್ ದುಬೈ ಇವರ ಸಂಯೋಜನೆಯಲ್ಲಿ ಬಿಲ್ಲವರ ಫ್ಯಾಮಿಲಿ ದುಬೈ ಇದರ ವಾರ್ಷಿಕೋತ್ಸವ ಕಾರ್ಯಕ್ರಮವು ಅಕ್ಟೋಬರ್ 25ರಂದು ಸಂಜೆ 4ಗಂಟೆಯಿಂದ 10ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಅದ್ಧೂರಿಯಾಗಿ ನೆರವೇರಲಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ ನಕ್ಕು ನಗಿಸುವ ಹಾಸ್ಯ ಕಾರ್ಯಕ್ರಮ. ಹೌದು ವಿ4 ನ್ಯೂಸ್‌ನ ಜನಪ್ರಿಯ ಕಾಮಿಡಿ ಪ್ರೀಮಿಯರ್ ಲೀಗ್‌ನಲ್ಲಿ ಖ್ಯಾತಿಯನ್ನು ಪಡೆದಿರುವ ಎವರ್‌ಗ್ರೀನ್ ಸಾಕ್ಷಿ ತಂಡ ಮತ್ತು ಫ್ರೆಂಡ್ಸ್ ಮಂಗಳೂರು ತಂಡದಿಂದ ತೆಲಿಕೆ ಬಾಯಿ ನಿಲಿಕೆ ಎಂಬ ಹಾಸ್ಯಮಯ ನಾಟಕ ನಡೆಯಲಿದೆ. 

ಸಾಕ್ಷಿ ತಂಡದ ಕಲಾವಿದರಾದ ಶುಭಕರ್ ಬೆಳಪು, ನಾಗರಾಜ್ ಉಪ್ಪೂರು, ಚಂದ್ರಶೇಖರ್ ಬಂಟ್ವಾಳ, ಸುರೇಶ್ ಪರಪು ಹಾಗೇನೆ ಫ್ರೆಂಡ್ಸ್ ಮಂಗಳೂರು ತಂಡದ ರಂಜನ್ ಬೋಳೂರ್, ಪ್ರವೀಣ್ ಕೊಡಕಲ್, ರಾಕೇಶ್ ಶೆಟ್ಟಿಯವರು ಅನಿವಾಸಿ ಭಾರತೀಯರನ್ನು ನಕ್ಕು ನಗಿಸಲಿದ್ದಾರೆ. ಅಷ್ಟುಮಾತ್ರವಲ್ಲದೆ ಪರಿಪೂರ್ಣ ಮನರಂಜನೆಯಿಂದ ಕೂಡಿದ ವೈವಿದ್ಯಮಯ ಸಾಂಸ್ಕೃತಿಕ, ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆಯಲಿದೆ. ಚಕ್ರಪಾಣಿ ನೃತ್ಯ ಕಲಾಕೇಂದ್ರ ಮಂಗಳೂರು ಇವರಿಂದ ಕೋರ್‍ದಬ್ಬು ತನ್ನಿಮಾನಿಗ ತುಳು ನೃತ್ಯ ರೂಪಕ ಪ್ರೇಕ್ಷಕರಿಗೆ ಮನೋರಂಜನೆ ನೀಡಲಿದೆ.

Related posts

Leave a Reply

Your email address will not be published. Required fields are marked *