Header Ads
Breaking News

ದುರ್ಗಾ ಇಂಟರ್ ನ್ಯಾಶನಲ್ ಕಟ್ಟಡದಲ್ಲಿ 3M ಮೊಬೈಲ್ಸ್ ಮಳಿಗೆ ಶುಭಾರಂಭ

ಉಡುಪಿಯ ಹೃದಯ ಭಾಗದಲ್ಲಿರುವ ದುರ್ಗಾ ಇಂಟರ್ ನ್ಯಾಶನಲ್ ಕಟ್ಟಡದಲ್ಲಿ 3N ಮೊಬೈಲ್ ಮಳಿಗೆ ಇಂದು ಶುಭಾರಂಭಗೊಂಡಿತು.ಉದ್ಯಮಿ ಜೆರಿ ವಿನ್ಸಂಟ್ ಡಯಾಸ್ ನೂತನ ಮೊಬೈಲ್ ಮಳಿಗೆಯನ್ನ ರಿಬ್ಬನ್ ಹಾಗೂ ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ಎಲ್ಲಾ ವರ್ಗದವರೂ ಈಗ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಮೊಬೈಲ್ ನಲ್ಲಿ ಒಳಿತು , ಕೆಡುಕು ಎರಡೂ ಇದೆ.

ಆದ್ರೆ ಹಿತ ಮಿತವಾದ ಬಳಕೆ ಮಾಡಿದರೆ ಎಲ್ಲರಿಗೂ ಉತ್ತಮ ಎಂದ್ರು. ಕಾರ್ಯಕ್ರಮದಲ್ಲಿ ಪ್ರಧಾನ ಆಕರ್ಷಣೆಯಾಗಿ ತುಳು ಚಿತ್ರ ನಟ ರೂಪೇಶ್ ಶೆಟ್ಟಿ ಭಾಗವಹಿಸಿದ್ದರು. ಈ ಸಂದರ್ಬದಲ್ಲಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯುಹೋ ಮೊಬೈಲ್ಸ್ ನ ಸ್ಟೇಟ್ ಹೆಡ್ ಚಂದ್ರ ಶೇಖರ್, ಅಜಿತ್ ಕುಮಾರ್, ಮೊಹಮ್ಮದ್ ಬಿನ್ ಶಾದ್,ಅರ್ನಾಲ್ಡ್ ಡಿಸಿಲ್ವಾ, ಪಾಲುದಾರರಾದ ರಮೇಶ್ ಪೂಜಾರಿ ಸಿರಿ ಉಪಸ್ಥಿತರಿದ್ದರು. ಉದ್ಘಾಟನೆಯ ಅಂಗವಾಗಿ ಲಕ್ಕಿ ಕೂಪನ್ ಗ್ರಾಹಕರು ಪಡೆಯಲಿದ್ದು ಗೆದ್ದ ಲಕ್ಕಿ ವಿಜೇತರು ಕಾರು ಗೆಲ್ಲಬಹುದಾಗಿದೆ. ಎಲ್ಲಾ ಕಂಪೆನಿಯ ಮೊಬೈಲ್ ಹಾಗೂ ಅದರ ಉಪಕರಣಗಳು ಇಲ್ಲಿ ಲಭ್ಯ ಇದೆ.

Related posts

Leave a Reply