Header Ads
Breaking News

ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ – ಆರೋಗ್ಯ ಸೇವೆಗೆ ಲಭ್ಯವಿರುವ ಡಾ. ಜಿ.ಜಿ. ಲಕ್ಷ್ಮಣ್ ಪ್ರಭು

ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ ಕಟೀಲಿನಲ್ಲಿ ಮಂಗಳೂರಿನ ಖ್ಯಾತ ಮೂತ್ರಪಿಂಡ ಶಸ್ತ್ರ ಚಿಕಿತ್ಸಾ ತಜ್ಞರಾದ ಹಾಗೂ ಕೆಎಂಸಿ ಆಸ್ಪತ್ರೆಯ ಮಂಗಳೂರಿನ ಯೂರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಜಿ. ಲಕ್ಷ್ಮಣ್ ಪ್ರಭು ಲಭ್ಯವಿರುತ್ತಾರೆ.
ಮೂತ್ರದಲ್ಲಿ ಉರಿತ, ರಕ್ತ ಅಥವಾ ಕೀವು ಬರುವುದು, ಮೂತ್ರದ ಪ್ರಮಾಣದಲ್ಲಿ ಕಡಿಮೆಯಾಗುವುದು, ಮೂತ್ರ ವಿಸರ್ಜನೆಯಲ್ಲಿ ಅಡಚಣೆಯಾಗುವುದು ಹನಿ ಹನಿ ಮೂತ್ರ ಹೋಗುವುದು, ಹೊಟ್ಟೆಯಲ್ಲಿ ಗಂಟಾಗುವುದು ಮತ್ತು ಸೊಂಟದಲ್ಲಿ ನೋವಾಗುವುದು, 6ವರ್ಷದ ನಂತರವೂ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವುದು ಮುಂತಾದ ಮೂತ್ರಪಿಂಡ ಮತ್ತು ಮೂತ್ರ ಕೋಶ ಸಂಬಂಧಿತ ಸಮಸ್ಯೆಗಳಿರುವವರು ಇದರ ಪ್ರಯೋಜವನ್ನು ಪಡೆದುಕೊಳ್ಳಬಹುದು. ಬೆಳಿಗ್ಗೆ ಸಮಯ 10ರಿಂದ ಅಪರಾಹ್ನ 12.30ರ ವರೆಗೆ ಇವರ ಸಂದರ್ಶನಕ್ಕೆ ಲಭ್ಯರಿದ್ದು, ಕಟೀಲು ಆಸುಪಾಸಿನ ಜನರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ದೂರವಾಣಿ ಸಂಖ್ಯೆ 6364872121 ಮತ್ತು 0824- 2200022 ಕ್ಕೆ ಕರೆಮಾಡಬಹುದು.

Related posts

Leave a Reply

Your email address will not be published. Required fields are marked *