Header Ads
Breaking News

ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ದಿನೇಶ್ ಶೆಟ್ಟಿ ಕೊಟ್ಟಿಂಜ ; ಬೇಕಿದೆ ದಾನಿಗಳ ನೆರವು

ಬಂಟ್ವಾಳ: ಫರಂಗಿಪೇಟೆಯಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪುದು ಬಿಜೆಪಿ ಶಕ್ತಿ ಕೇಂದ್ರದ ಸಾಮಾಜಿಕ ಜಾಲಾತಾಣ ಸಂಚಾಲಕ, ಪೊಟೋಗ್ರಾಫರ್ ದಿನೇಶ್ ಶೆಟ್ಟಿ ಕೊಟ್ಟಿಂಜ ನಿಧಾನವಾಗಿ ಚೇರಿಸಿಕೊಳ್ಳುತ್ತಿದ್ದಾರೆ. ದುಷ್ಕರ್ಮಿಗಳ ಮಚ್ಚಿನೇಟಿಗೆ ತಲೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಗಾಯಗೊಂಡಿದ್ದ ದಿನೇಶ್ ಶೆಟ್ಟಿಯವರಿಗೆ ಈಗಾಗಲೇ ತುರ್ತು ಶಸ್ತ್ರಚಿಕಿತ್ಸೆಗಳನ್ನು ಪೂರೈಸಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಗುರುವಾರ ವಾರ್ಡ್‍ಗೆ ಸ್ಥಳಾಂತರಿಸಲಾಗಿದೆ. 

ಫರಂಗಿಪೇಟೆಯ ಖಾಸಗಿ ಕಟ್ಟಡದಲ್ಲಿರುವ ತೃಷಾ ಸ್ಟುಡಿಯೋಗೆ ಕಳೆದ ಅ.28ರಂದು ರಾತ್ರಿ ಪೊಟೊ ತೆಗೆಸಿಕೊಳ್ಳಲೆಂದು ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಮಾರಾಕಾಯುಧಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಇದರಿಂದ ದಿನೇಶ್ ಶೆಟ್ಟಿಯವರ ದೇಹದ ತುಂಬೆಲ್ಲಾ ಗಾಯಗಳಾಗಿತ್ತು. ಕತ್ತಿಯ ಏಟಿಗೆ ಕೈಯ ಕೊಂಬೆರಳು ತುಂಡರಿಸಲ್ಪಟ್ಟಿದೆ. ಇದೀಗ ದಿನೇಶ್ ಶೆಟ್ಟಿಯವರ ಆರೋಗ್ಯ ಸುಧಾರಿಸುತ್ತಿದ್ದು ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ಪೂರೈಸಲಾಗಿದ್ದು ಕೆಲವೊಂದು ಶಸ್ತ್ರಚಿಕಿತ್ಸೆಗಳು ಇನ್ನೂ ಬಾಕಿ ಉಳಿದಿವೆ.
ಬೇಕಿದೆ ದಾನಿಗಳ ನೆರವು ದಿನೇಶ್ ಶೆಟ್ಟಿಯವರ ಆಸ್ಪತ್ರೆಯ ಬಿಲ್ ಈಗಾಗಲೇ ಏಳು ಲಕ್ಷದ ಗಡಿ ದಾಟಿದೆ. ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಗಿದೆ. ಕೇವಲ ಪೊಟೋಗ್ರಾಫಿ ವೃತ್ತಿಯನ್ನು ನಂಬಿಕೊಂಡು ಅವರ ಕುಟುಂಬ ಜೀವನ ಸಾಗಿಸುತ್ತಿತ್ತು. ಇದೀಗ ಮನೆಗೆ ಆಧಾರಸ್ತಂಭವಾಗಬೇಕಿದ್ದ ಮನೆ ಯಜಮಾನ ಆಸ್ಪತ್ರೆಯಲ್ಲಿ ಉಳಿಯುವಂತಾಗಿದೆ. ದೊಡ್ಡ ಮೊತ್ತದ ಆಸ್ಪತ್ರೆಯ ಬಿಲ್ ಪಾವತಿಸಲು ಸಹೃದಯ ದಾನಿಗಳ ನೆರವು ಬೇಕಾಗಿದೆ. ಬಾಲಕಿಯೊರ್ವಳ ಮೇಲೆ ನಡೆದ ದೌಜ್ರ್ಯನ್ಯ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಲು ಪ್ರಯತ್ನಿಸಿದ್ದ ದಿನೇಶ್ ಶೆಟ್ಟಿಯವರಿಗೆ ಮಾನವೀಯ ಹೃದಯಗಳು ಸ್ಪಂದಿಸಬೇಕಾಗಿದೆ. ಆರ್ಥಿಕ ನೆರವು ನೀಡುವ ದಾನಿಗಳು ದಿನೇಶ್ ಶೆಟ್ಟಿಯವರ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡುವಂತೆ ಅವರ ಕುಟುಂಬ ಬಂಧುಗಳು ಮನವಿ ಮಾಡಿಕೊಂಡಿದ್ದಾರೆ.
ಬ್ಯಾಂಕ್ ವಿವರ: ದಿನೇಶ್ ಶೆಟ್ಟಿ, ಓರಿಯಂಟಲ್ ಬ್ಯಾಂಕ್ ಆಫ್ ಕಾಮಾರ್ಸ್. ಖಾತೆ ಸಂಖ್ಯೆ: 09662010001020, ಐಎಫ್‍ಎಸ್‍ಸಿ ಕೋಡ್ ಔಖಃಅ0100966, ಗೂಗಲ್ ಪೇ ಸಂಖ್ಯೆ 9449591780 ಗೆ ಜಮಾ ಮಾಡಬಹುದಾಗಿದೆ.

Related posts

Leave a Reply

Your email address will not be published. Required fields are marked *