Header Ads
Breaking News

ದೆಹಲಿಯಲ್ಲಿ ಹೆಜಮಾಡಿ ಮಾಧವ ಆಚಾರ್ಯರಿಗೆ ರಾಷ್ಟ್ರೀಯ ಪ್ರಶಸ್ತಿ

ಪಡುಬಿದ್ರಿ: ನವದೆಹಲಿಯ ಸಿಲ್ವರ್ ಓಕ್ ಇಂಡಿಯಾ ಹಾರ್ಬಿಟೇಟ್ ಸೆಂಟರ್‍ನಲ್ಲಿ ಮಾರ್ಚ್ 12ರಂದು, ಇಂಡಿಯಾ ಎಚೀವರ್ಸ್ ಫಾರಂ ಸಂಸ್ಥೆಯ 51ನೇ ವರ್ಷದ “ಇಂಡಿಯಾ ಎಚೀವರ್ಸ್ ಅವಾರ್ಡ್” ರಾಷ್ಟ್ರೀಯ ಪ್ರಶಸ್ತಿ ಕಾಷ್ಟ ಶಿಲ್ಪಕ್ಕಾಗಿ ಪಲಿಮಾರು ಹೆಜಮಾಡಿ ಮಾಧವ ಆಚಾರ್ಯರಿಗೆ ನೀಡಿ ಗೌರವಿಸಿದೆ.

ಕರಾವಳಿ ಭಾಗದ ಅದೇಷ್ಟೋ ದೈವ ದೇವಸ್ಥಾನಗಳ ನಿರ್ಮಾಣ ಕಾರ್ಯದಲ್ಲಿ ತಮ್ಮ ಕಾಷ್ಟ ಶಿಲ್ಪವನ್ನು ಅರಳಿಸಿ ಸೈ ಎನಿಸಿಕೊಂಡಿರುವ ಮಾಧವ ಆಚಾರ್ಯ 2010ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಖಾಸಗಿ ಸಂಸ್ಥೆಗಳು ಇವರ ಸಾಧನೆಗಾಗಿ ಮಾಡಿದ ಸನ್ಮಾನ-ಅಭಿನಂದನೆಗಳು ಒಂದೆರಡಲ್ಲ, ಇದೀಗ ಇವರಿಗೊಲಿದ “ಇಂಡಿಯಾ ಎಚೀವರ್ಸ್ ಅವಾರ್ಡ್” ರಾಷ್ಟ್ರೀಯ ಪ್ರಶಸ್ತಿ ಈ ಎಲ್ಲಾ ಪ್ರಶಸ್ತಿಗಳಿಗೆ ಕಿರೀಟವಿಟ್ಟಂತ್ತಾಗಿದೆ.

ಈ ಅದ್ಧೂರಿಯ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರುಗಳಾದ ಪ್ರಹಾಲ್ಲದ್ ಸಿಂಗ್ ಪಾಟೇಲ್, ಸಂಜಯ್ ದೋತ್ರ, ಪ್ರೋ. ಅಶುತೋಶ್ ಶರ್ಮ, ಯೋಗೀಶ್ ಪೂಂಜ, ಕಲುಮೂರು ರಘುರಾಮ ಕೃಷ್ಣರಾಜು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *