
ದೆಹಲಿಯ ಐತಿಹಾಸಿಕ ರೈತಾಂದೋಲನವನ್ನು ಬೆಂಬಲಿಸಿ, ಜನವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿ ಬೆಂಗಳೂರಿನ ಸಮಾನ ಮನಸ್ಕ ವಕೀಲರ ವೇದಿಕೆಯು ನಗರದ ಸಿವಿಲ್ ಕೋರ್ಟ್ ಆವರಣದಿಂದ ಹೈಕೋರ್ಟ್ ವರೆಗೆ ‘ವಕೀಲರ ನಡಿಗೆ ರೈತರ ಕಡೆಗೆ’ ಮೆರವಣಿಗೆ ಮತ್ತು ಮಾನವ ಸರಪಳಿಯನ್ನು ನಡೆಸಿದರು.
ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷ ರಂಗನಾಥ್, ಪೊನ್ನಯ್ಯ, ಬಾಲನ್, ಶಂಕರಪ್ಪ, ಹರೀಂದ್ರ, ಶ್ರೀನಿವಾಸ್ ಅವರ ನೇತೃತ್ವದಲ್ಲಿ ವಕೀಲರ ನಡೆ ರೈತರ ಕಡೆ ಕಾರ್ಯಕ್ರಮ ನಡೆಯಿತು.