Header Ads
Breaking News

ದೆಹಲಿ ಹಿಂಸಾಚಾರ ಪ್ರಕರಣ : ಪುತ್ತೂರಿನಲ್ಲಿ ಮುಸ್ಲಿಂ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನೆ

ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಮತ್ತು ಕೋಮು ಪ್ರಚೋದನಾ ಭಾಷಣ ಮಾಡಿ ದೆಹಲಿಯಲ್ಲಿ ಹಿಂಸಾಚಾರಕ್ಕೆ ಕಾರಣರಾದ ಶಾಸಕ ಕಪಿಲ್ ಮಿರ್ಶರ ಹಾಗೂ ಬೆಂಬಲಿಗರ ಬಂಧಿಸಬೇಕು. ಹಿಂಸಾಚಾರದಲ್ಲಿ ಜೀವಹಾನಿ, ಸೊತ್ತುಹಾನಿ ಮತ್ತು ಗಾಯಗೊಂಡಿರುವ ಅಮಾಯಕರಿಗೆ ಸೂಕ್ತ ನ್ಯಾಯ ಮತ್ತು ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಪುತ್ತೂರು ತಾಲೂಕು ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ಪುತ್ತೂರಿನ ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ಅವರು, ದೆಹಲಿಯಲ್ಲಿ ನಡೆದ ಹಿಂಸಾಚಾರ ಘಟನೆ ದೇಶವೇ ತಲೆತಗ್ಗಿಸುವ ವಿಚಾರ. ತಲೆ ಬುಡವಿಲ್ಲದ ಅರ್ಥವಿಲ್ಲದ ಕಾನೂನುಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಹೋರಾಟದ ಹಾದಿ ಹಿಡಿಯುವ ಪರಿಸ್ಥಿತಿಯನ್ನು ನಿರ್ಮಿಸಲಾಗಿದ್ದು, ಸಂವಿಧಾನ ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಕೋಮುವಾದಿ ಶಕ್ತಿಗಳು ಮಾಡುತ್ತಿವೆ. 2 ವರ್ಷಗಳ ಕಾಲ ಜೈಲಿನಲ್ಲಿದ್ದ ಕ್ರಿಮಿನಲ್ ಆರೋಪಿ ದೇಶದ ಗೃಹ ಸಚಿವರಾಗಿದ್ದಾರೆ ಎಂಬುವುದೇ ದೇಶದ ದೊಡ್ಡ ದುರಂತ ಎಂದರು.

ಪ್ರತಿಭಟನೆಯಲ್ಲಿ ಪುತ್ತೂರು ತಾಲೂಕು ಮುಸ್ಲಿಂ ಒಕ್ಕೂಟದ ಸಂಚಾಲಕ ಅಶ್ರಫ್ ಕಲ್ಲೇಗ, ಪಿಎಫ್‍ಐ ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ, ಬಪ್ಪಳಿಗೆ ಮಸೀದಿಯ ಖತೀಬ ಅಬ್ದುಲ್ ನಹೀಂ ಫೈಯಿ, ತಾಲೂಕು ಮುಸ್ಲಿಂ ಒಕ್ಕೂಟದ ಪ್ರಮುಖರಾದ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ.ರಜಾಕ್ ಹಾಜಿ ಮತ್ತಿತರರು ಹಾಜರಿದ್ದರು.

Related posts

Leave a Reply

Your email address will not be published. Required fields are marked *