Header Ads
Breaking News

ದೇವಸ್ಥಾನದ ಆವರಣದಲ್ಲಿ ಹುಲಿವೇಷಕ್ಕೆ ಅನುಮತಿ

ನವರಾತ್ರಿ ದಸರಾ ಸಂದರ್ಭದಲ್ಲಿ ಹಲವು ಷರತ್ತಿಗೊಳಪಟ್ಟು ದೇವಸ್ಥಾನಗಳ ಆವರಣದೊಳಗೆ ಮಾತ್ರ ಹುಲಿವೇಷ ಪ್ರದರ್ಶನಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿದೆ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಹುಲಿವೇಷಕ್ಕೆ ಅನುಮತಿ ನೀಡಲು ತೀರ್ಮಾನಿಸಲಾಯಿತು. ಒಂದು ತಂಡದಲ್ಲಿ 10 ವೇಷಧಾರಿಗಳಿಗೆ ಮಾತ್ರ ಅವಕಾಶ. ಹರಕೆ ರೂಪದಲ್ಲಿ ದೇವಸ್ಥಾನಗಳ ಆವರಣ ದೊಳಗೆ ನೀಡುವ ಪ್ರದರ್ಶನಕ್ಕೆ ಮಾತ್ರ ಅವಕಾಶವಿದ್ದು ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಮಾರ್ಗಸೂಚಿಗಳನ್ನು ಪಾಲಿಸಬೇಕು. ನಿಗದಿತ ಅವಧಿಯಲ್ಲಿ ಮಾತ್ರ ಪ್ರದರ್ಶನ ನೀಡಬೇಕು. ಮಾರ್ಗಸೂಚಿಗಳ ಉಲ್ಲಂಘನೆಯಾದರೆ ಅಥವಾ ಅಹಿತಕರ ಘಟನೆ ಸಂಭವಿಸಿದರೆ ಸಂಬಂಧಪಟ್ಟ ದೇವಸ್ಥಾನದ ಆಡಳಿತಾದರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದೆಂದು ನಿರ್ಣಯಿಸಲಾಯಿತು.

Related posts

Leave a Reply

Your email address will not be published. Required fields are marked *