Header Ads
Breaking News

ದೇಶದಲ್ಲಿ ಲಾಕ್ ಡೌನ್ ಘೋಷಣೆ : ಮೆಡಿಕಲ್ ಮತ್ತು ತರಕಾರಿ ಅಂಗಡಿಗಳಲ್ಲಿ ನೂಕುನುಗ್ಗಲು

ವಿಟ್ಲ: ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ವಿಟ್ಲದಲ್ಲಿ ಅಗತ್ಯ ಸಾಮಾಗ್ರಿ ಖರೀದಿಸಲು ಜನರು ಮುಗಿಬಿದ್ದಿದ್ದು, ನೂಕುನುಗ್ಗಲು ಉಂಟಾಗಿದೆ.

ವಿಟ್ಲದಲ್ಲಿ 10 ಗಂಟೆಯೊಳಗೆ ಅಗತ್ಯ ಸಾಮಾಗ್ರಿ ಖರೀದಿಸಿ ಮನೆ ಸೇರುವಂತೆ ವಿಟ್ಲ ಪೆÇಲೀಸರು ಸೂಚನೆ ನೀಡಿದ್ದರು. ಇದರಿಂದ ಬೆಳಿಗ್ಗೆ 6 ಗಂಟೆಯಿಂದಲೇ ಜನರು ಪೇಟೆ ಬರಲು ಆರಂಭಿಸಿದ್ದಾರೆ. ಹಾಲು, ತರಕಾರಿ, ಮೆಡಿಕಲ್ ಅಂಗಡಿಗಳಲ್ಲಿ ಜನರು ಸರದಿ ಸಾಲಿನಲ್ಲಿ ಸಾಮಾಗ್ರಿ ಖರೀದಿಸಲು ಮುಗಿ ಬಿದ್ದಿದ್ದಾರೆ. ಸುಮಾರು 8 ಗಂಟೆ ವೇಳೆ ಪೇಟೆಯಲ್ಲಿ ಜನ ಸಂದಣಿ ಹೆಚ್ಚಾಗಿದೆ. ವಾಹನ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ. ಮೆಡಿಕಲ್, ತರಕಾರಿ ಅಂಗಡಿಗಳಲ್ಲಿ ನೂಕುನುಗ್ಗಲು ಉಂಟಾಗಿತ್ತು. ನಾಳೆಯಿಂದ ಅಂಗಡಿ ಸಂಪೂರ್ಣ ಬಂದ್ ಎಂಬಂತೆ ಜನತೆ ವರ್ತಿಸುತ್ತಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *