Header Ads
Header Ads
Header Ads
Breaking News

ದೇಶದ ಒಳಗೆ ಕೆಲಸ ಮಾಡುವ ಸಾಮರ್ಥ್ಯವನ್ನು ಗಳಿಸಿಕೊಳ್ಳುವ ಕಾರ್ಯ ಯುವ ಸಮೂಹದಿಂದ ಆಗಲಿ ಯುವ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ

ಉಳ್ಳಾಲದ ಕೋಟೆಕಾರಿನ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ಮೇಜರ್ ಸಂದೀಪ್ ಉನ್ನಿಕೃಷ್ಣನ್’ ವೇದಿಕೆಯಲ್ಲಿ ಯೋಧನಮನ ಕಾರ್ಯಕ್ರಮ ನಡೆಯಿತು. ಇನ್ನೂ ಯೋಧನಮನ ಕಾರ್ಯಕ್ರಮದಲ್ಲಿ ನಿವೃತ್ತ ಮತ್ತು ಹಾಲಿ ಯೋಧರಿಗೆ ಯುವ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ  ಸನ್ಮಾನ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವ್ರುಯೋಧ ನಮನ ಮಾಡುವ ಮೂಲಕ ಗಡಿಯಲ್ಲಿರುವ ಯೋಧರನ್ನು ಗೌರವ ತೋರಿಸಿದ್ದೇವೆ. ಇದರಿಂದ ಪ್ರೇರಣೆ ತೆಗೆದುಕೊಂಡು ದೇಶದ ಒಳಗೆ ಕೆಲಸ ಮಾಡುವ ಸಾಮರ್ಥ್ಯವನ್ನು ಗಳಿಸಿಕೊಳ್ಳುವ ಕಾರ್ಯ ಯುವ ಸಮೂಹದಿಂದ ಆಗಬೇಕಾಗಿದೆ ಅಂತಾ ಹೇಳಿದರು. ಈ ಸಂದರ್ಭದಲ್ಲಿ 30 ಮಂದಿ ಮಾಜಿ ಯೋಧರನ್ನು ಗೌರವಿಸಲಾಯಿತು.

ಈ ವೇಳೆ ಯುವಬ್ರಿಗೇಡ್‌ನ ಮಂಗಳೂರು ನಗರ ಸಂಚಾಲಕ ವಿನೋದ್ ವೈ, ತುಳುನಾಡು ಫ್ರೆಂಡ್ಸ್‌ನ ಗೌರವಾಧ್ಯಕ್ಷ ದೇವದಾಸ್ ಕೋಟೆಕಾರು ಮತ್ತಿತರು ಉಪಸ್ಥತಿರಿದ್ರು.

Related posts

Leave a Reply