Header Ads
Breaking News

ದೇಶದ ವಿರುದ್ಧ ಮುಗ್ಧರನ್ನು ತಪ್ಪುಹಾದಿಗೆಳೆಯುವುದು ದೇಶದ್ರೋಹದ ಕೆಲಸ : ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿಕೆ

ಸಿ ಎ ಎ ಗೊಂದಲ ಹಾಗೂ ಸಿ ಎ ಎ ಸಮರ್ಥನೆಗಾಗಿ ಮಂಗಳೂರಿನಲ್ಲಿ ಅಭಿನಂದನಾ ರಾಲಿಯನ್ನು ಹಮ್ಮಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತಾ ಶಾ ಅವರನ್ನು ಅಭಿನಂದಿಸುವ ಸಲುವಾಗಿ ಅಭಿನಂದನಾ ರಾಲಿಯನ್ನು ನಡೆಸುತ್ತಿದ್ದೇವೆ.ಜ. 27 ರಂದು ಜರಗುವ ಸಮರ್ಥನಾ ಸಮಾವೇಶದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಸಿಎಎ ಕುರಿತು ಇರುವ ತಪ್ಪು ಭಾವನೆಗಳ ಕುರಿತು ಜಾಗೃತಿಯನ್ನು ಮೂಡಿಸಲಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಹೇಳಿದರು.
ಅವರು ಸುರತ್ಕಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿ ಬಂಗ್ರಕೂಳೂರಿನಲ್ಲಿ ಜರಗುವ ಸಮರ್ಥನಾ ಸಮಾವೇಶದಲ್ಲಿ 1 ಲಕ್ಷಗಿಂತ ಅಧಿಕ ಜನಸೇರುವ ನಿರೀಕ್ಷೆಯಿದ್ದು ಪಾರ್ಕಿಂಗ್ ಸಮಸ್ಯೆ ಜನಜೀವನಕ್ಕೆ ಸಮಸ್ಯೆಯಾಗದಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಯಾರೊಬ್ಬರಿಗೂ ಕೂಡಾ ಅಂಗಡಿ ಮುಗ್ಗಟ್ಟನ್ನು ಬಂದ್ ಮಾಡುವಂತೆ ಒತ್ತಾಯಿಸಿಲ್ಲ. ಸ್ವಯಂ ಪ್ರೇರಿತರಾಗಿ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಮಂಗಳೂರು ಮಂಡಲದಿಂದ ಸುಮಾರು 15 ರಿಂದ 20 ಸಾವಿರ ಮಂದಿ ಜನಸೇರುವ ನಿರೀಕ್ಷೆಯಿದೆ. ಸಿಎಎ ಎನ್ನುವುದು ಬೇರೆ ದೇಶದಿಂದ ಅನ್ಯಾಯ, ದೌರ್ಜನ್ಯಕ್ಕೊಳಗಾದವರಿಗೆ ಪೌರತ್ವ ನೀಡುವುದಾಗಿದ್ದು ಭಾರತದ ಯಾವ ಮುಸ್ಲಿಮರಿಗೂ ಇದರಿಂದ ತೊಂದರೆ ಇಲ್ಲ. ಕೆಲವರು ರಾಜಕೀಯ ದುರುದ್ದೇಶದಿಂದ ಮುಗ್ಧ ಜನರನ್ನು ತಪ್ಪು ಹಾದಿಗೆ ಎಳೆಯುವ ಮೂಲಕ ದೇಶದ್ರೋಹದ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಪೂಜಾ ಪೈ, ಮನಪಾ ಸದಸ್ಯರಾದ ವರುಣ್ ಚೌಟ, ಲೋಕೇಶ್ ಬೊಳ್ಳಾಜೆ, ಮಂಡಲ ಅಧ್ಯಕ್ಷ ವಿಠಲ್ ಸಾಲ್ಯಾನ್, ಮನಪಾ ಸದಸ್ಯೆಯರಾದ ನಯನಾ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *