Header Ads
Breaking News

ದೇಶವೇ ಲಾಕ್ ಡೌನ್ ಹಿನ್ನೆಲೆ : ಸಾಮಾಗ್ರಿ ಖರೀದಿಸಲು ಮುಗಿ ಬಿದ್ದ ಜನತೆ

ವಿಟ್ಲ: ದೇಶದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಟ್ಲದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ವಿಟ್ಲ ಪಟ್ಟಣ ಪಂಚಾಯಿತಿ ಅಂಗಡಿ ಮುಂಭಾಗ ಸರದಿ ಸಾಲಿನಲ್ಲಿ ನಿಂತು ಮಾರ್ಕ್ ಹಾಕಿದ್ದರೂ ಜನರು ಮಾತ್ರ ಅವುಗಳನ್ನು ಮೀರಿ ನೂಕುನುಗ್ಗಲಿನಲ್ಲಿ ಸಾಮಗ್ರಿ ಖರೀದಿಸಲು ಮುಗಿ ಬಿದ್ದಿದ್ದಾರೆ.

ವಿಟ್ಲ ಠಾಣಾ ವ್ಯಾಪ್ತಿಯ ಪೆರುವಾಯಿ, ಅಡ್ಯನಡ್ಕ, ಕಂಬಳಬೆಟ್ಟು, ಕಡಂಬು ಮಂಗಳಪದವು, ಉಕ್ಕುಡ ಮೊದಲಾದ ಕಡೆಗಳಿಂದ ನೂರಾರು ಮಂದಿ ವಿಟ್ಲ ಪೇಟೆಗೆ ಅಗತ್ಯ ಸಾಮಾಗ್ರಿ ಖರೀದಿಸಲು ವಿಟ್ಲ ಪೇಟೆ ಆಗಮಿಸುತ್ತಾರೆ. ಸ್ಥಳೀಯವಾಗಿ ಅಗತ್ಯ ವಸ್ತುಗಳು ಸಿಗದ ಕಾರಣ ವಿಟ್ಲಕ್ಕೆ ಆಗಮಿಸುತ್ತಿದ್ದಾರೆ. ಬುಧವಾರ ಬೆಳಿಗ್ಗೆ ವಿಟ್ಲದಲ್ಲಿ ನೂಕುನುಗ್ಗಲು ಉಂಟಾಗಿತ್ತು. ವಾಹನ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿತ್ತು. ಹಿನ್ನೆಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಮೆಡಿಕಲ್, ತರಕಾರಿ, ದಿನಸಿ ಅಂಗಡಿ ಮುಂಭಾಗ ಜನ ಜಂಗುಳಿ ಸೇರದಂತೆ ಅಂತರ ಕಾಯ್ದು ಕೊಳ್ಳಲು ಅಂಗಡಿ ಮುಂಭಾಗ ಮಾರ್ಕ್ ಹಾಕಿದ್ದರು. ಆದರೆ ಗುರುವಾರ ಕೂಡ ಜನರು ಮಾರ್ಕ್ ಅನ್ನು ಲೆಕ್ಕಿಸದೇ ರಾಶಿ ರಾಶಿಯಾಗಿ ನಿಂತು ಸಾಮಾಗ್ರಿ ಖರೀದಿಸಲು ಮುಂದಾಗಿದ್ದಾರೆ. ಪೇಟೆಯಲ್ಲಿ ವಾಹನ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ. ಈ ಸಂದರ್ಭ ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಅವರು ಜನರಲ್ಲಿ ಮನವಿ ಮಾಡಿದರು. ಹಾಗೂ ಅಂಗಡಿ ಮಾಲಕರಿಗೂ ಎಚ್ಚರಿಕೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *