Header Ads
Header Ads
Header Ads
Breaking News

ವಿದ್ಯುತ್ ಕಂಬಕ್ಕೆ ಶಾಲಾ ಬಸ್ಸ್ ಢಿಕ್ಕಿ : ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಮಂಜೇಶ್ವರ: ಶಾಲಾ ವಿದ್ಯಾರ್ಥಿಗಳನ್ನು ಹೇರಿಕೊಂಡು ಸಾಗುತ್ತಿದ್ದ ಬಸ್ಸೊಂದು ಎದುರಿನಿಂದ ಬರುತಿದ್ದ ವಾಹನವೊಂದಕ್ಕೆ ಸೈಡ್ ನೀಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸಿನ ಸೈಡ್ ಮಿರರ್ ವಿದ್ಯುತ್ ತಂತಿಗೆ ಸಿಲುಕಿ ಬಸ್ಸು ಮುಂದಕ್ಕೆ ಸಾಗುವಾಗ ವಿದ್ಯುತ್ ಕಂಬ ತಂತಿ ಸಮೇತ ಬಸ್ಸಿನ ಮೆಲೆಗೆ ಮುರಿದು ಬಿದ್ದಿದೆ. ಅದೃಷ್ಟವಷಾತ್ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯಲ್ಲಿ ವಿದ್ಯುತ್ ನಿಲುಗಡೆಯಾಗಿರುವ ಹಿನ್ನೆಲೆಯಲ್ಲಿ ಭಾರಿ ದುರಂತ ಕೂದಲೆಳೆ ಅಂತರದಿಂದ ತಪ್ಪಿ ಹೋಗಿದೆ. ಮಂಜೇಶ್ವರ ಎಸ್‍ಎಟಿ ಶಾಲಾ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಬಸ್ಸು ಮಂಜೇಶ್ವರ ಗೋವಿಂದ ಪೈ ಕಾಲೇಜು ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸದಲ್ಲಿ ತಂತಿ ಸಮೇತ ಕಂಬ ಮುರಿದು ಬಸ್ಸಿನ ಮೇಲಕ್ಕೆ ಬಿದ್ದಿದೆ. ಈ ಸಂದರ್ಭ ಬಸ್ಸಿನಲ್ಲಿ ಸುಮಾರು 40 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ.

s

Related posts

Leave a Reply

Your email address will not be published. Required fields are marked *