Header Ads
Breaking News

ದ.ಕ. ಜಿಲ್ಲೆಯಲ್ಲಿ ಕೆಂಪು ಗಣಿಗಾರಿಕೆ ನಡೆಸದಂತೆ ಅಭಿಯಾನ- ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸೂಚನೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ಕೆಂಪು ಗಣಿಗಾರಿಕೆ ನಡೆಸದಂತೆ ಅದನ್ನು ಸಕ್ರಮಗೊಳಿಸುವ ಕಾರ್ಯಕ್ಕೆ ಅಭಿಯಾನ ನಡೆಸಲಾಗುವುದು. ಗ್ರಾಮ ಪಂಚಾಯತ್ ಮಟ್ಟಗಳಲ್ಲಿ ಗ್ರಾಮ ಕರಣಿಕರು ಹಾಗೂ ಪಿಡಿಒಗಳು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧವೇ  ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಸಿದ್ದಾರೆ.

ದ.ಕ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. ಪಟ್ಟಾ ಭೂಮಿಯಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲು ಗಣಿ ಇಲಾಖೆಯಿಂದ ನೇರವಾಗಿ ಜಿಲ್ಲಾ ಟಾಸ್ಕ್‌ಫೋರ್ಸ್ ಮಾಹಿತಿಯಿಲ್ಲದೆ ಅನುಮತಿ ನೀಡಲಾಗುತ್ತದೆ, ಇದನ್ನು ಬದಲಾಯಿಸುವಂತೆ ಈಗಾಗಲೇ ವಾಣಿಜ್ಯ ಇಲಾಖೆ ಕಾರ್ಯದರ್ಶಿಗೆ ತಿಳಿಸಲಾಗಿದೆ. ಸರಕಾರಿ ಭೂಮಿಯಲ್ಲಿ ಎಲ್ಲೂ ಕೆಂಪು ಕಲ್ಲು ತೆಗೆಯುವ ಹಾಗಿಲ್ಲ. ಪಟ್ಟಾ ಜಾಗದಲ್ಲಿ ಅನುಮತಿ ಪಡೆದರೂ ಕೆಲವರು ಬೇರೆ ಜಾಗದಲ್ಲಿ ಹೋಗಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬಾಳೆಪುಣಿ, ಪಜೀರು ಮುಂತಾದೆಡೆಯಿಂದ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ತಾಂತ್ರಿಕ ವರದಿ ಪಡೆದಿರುವುದಾಗಿ ಡಾ.ರಾಜೇಂದ್ರ ತಿಳಿಸಿದರು.

ಜಿಲ್ಲೆಯಲ್ಲಿ ಬೀಚ್ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಟಿಯಿಂದ ತಣ್ಣೀರುಬಾವಿ, ಪಣಂಬೂರು, ಸುರತ್ಕಲ್ ಸಹಿತ ಬೀಚ್‌ಗಳನ್ನು ಖಾಸಗಿ ಸಹಯೋಗದೊಂದಿಗೆ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಒಳಪಡಿಸುವುದಕ್ಕೆ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗುವುದು. ಪಣಂಬೂರು ಬಂದರಿಗೆ ಆಗಮಿಸುವ ವಿಲಾಸಿ ಹಡಗುಗಳ ಪ್ರಯಾಣಿಕರನ್ನು ತ್ವರಿತವಾಗಿ ವಿವಿಧ ಜಾಗಗಳಿಗೆ ಕರೆದೊಯ್ಯಲು ಹೆಲಿ ಟೂರಿಸಂ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ, ಅದನ್ನು ಇನ್ನಷ್ಟು ವ್ಯವಸ್ಥಿತಗೊಳಿಸಿ, ಪೂರ್ವ ಬುಕಿಂಗ್ ಮಾಡುವಂತೆ ಸುಧಾರಣೆಪಡಿಸಲಾಗುವುದು ಎಂದರು.
ಮಂಗಳೂರು ಎ.ಸಿ ಮದನ್ ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ವಿಜಯ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಹಾಜರಿದ್ದರು.

Related posts

Leave a Reply

Your email address will not be published. Required fields are marked *