Header Ads
Breaking News

ದ.ಕ. ಜಿಲ್ಲೆಯಲ್ಲಿ ಮೋದಿ ಅಲೆಯ ಬಗ್ಗೆ ಸಂಸದ ನಳಿನ್ ಹೇಳಿದ್ದೇನು ಗೊತ್ತೇ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋದಿ ಅಲೆ ಅಲೆಯಾಗಿ ಉಳಿದಿಲ್ಲ, ಸುನಾಮಿಯಾಗಿ ಸೃಷ್ಟಿಯಾಗಿದೆ ಅಂತಾ ದಕ್ಷಿಣ ಕನ್ನಡ ಲೋಕಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ರು. ಈ ಕುರಿತು ಮಂಗಳೂರಿನ ಬಿಜೆಪಿಯ ಬಂಟ್ಸ್ ಹಾಸ್ಟೆಲ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರೇಜ್ ಮೂಲಕ ಮತಯಾಚಿಸಿದ್ದೇವೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪ್ರೇಜ್ ಮೂಲಕವೇ ಅತೀ ಹೆಚ್ಚು ಸೀಟು ಗೆದ್ದಿದ್ದೇವೆ. ಹಿಂದೆಲ್ಲಾ ಕಾರ್ಯಕರ್ತರು ಕೆಲಸ ಮಾಡುತ್ತಿದ್ದರು. ಅದ್ರೆ ಈಗ ಮತದಾರನೇ ಮೋದಿಗಾಗಿ ಕಾರ್ಯಕರ್ತನಾಗಿದ್ದಾರೆ ಅಂತಾ ತಿಳಿಸಿದರು.
ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಜನರಿಂದ ಅದ್ಬುತ ಬೆಂಬಲ ಸಿಕ್ಕಿದೆ. ಹಾಗಾಗಿ ಮೋದಿ ಅಲೆ ಅಲೆಯಾಗಿ ಉಳಿದಿಲ್ಲ ಸುನಾಮಿಯಾಗಿದೆ ಎಂದು ಅವರು ತಿಳಿಸಿದರು. ಇನ್ನು ಎಸ್ಡಿಪಿಐ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತೆ ಅನ್ನೋದು ಸುಳ್ಳು, ಪ್ರಜಾಪ್ರಭುತ್ವದಲ್ಲಿ ಯಾರೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಅಂತಾ ಹೇಳಿದ್ರು.

Related posts

Leave a Reply

Your email address will not be published. Required fields are marked *