
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹರ್ಷಿ ವಾಲ್ಮೀಕಿಯವರ ಧ್ಯಾನಕೇಂದ್ರ, ವಾಲ್ಮೀಕಿ ರಾಮಯಾಣದ ಅಧ್ಯಯನ ಕೇಂದ್ರ ಮತ್ತು ವಾಲ್ಮೀಕಿ ಜನಾಂಗದ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಲು ಮತ್ತು ಮದುವೆ ಇತರೆ ಕಾರ್ಯಕ್ರಮಗಳನ್ನು ನಡೆಸಲು ಮಹರ್ಷಿ ವಾಲ್ಮೀಕಿ ಭವನ ನಿರ್ಮಿಸಲು ಜಾಗವನ್ನು ನೀಡಬೇಕೆಂದು ಬಹು ದಿನಗಳ ಬೇಡಿಕೆಯಾಗಿದೆ. ಆದ್ದರಿಂದ ಶೀಘ್ರವಾಗಿ ಜಾಗವನ್ನು ಮಂಜೂರು ಮಾಡಬೇಕೆಂದು ವಾಲ್ಮೀಕಿ ಗುರುಕುಲ ಪೀಠ ಚಿಕ್ಕಬಳ್ಳಾಪುರ ಪೀಠಾಧ್ಯಕ್ಷರಾದ ಶ್ರೀ ಬ್ರಹ್ಮಾನಂದ ವಾಲ್ಮೀಕಿ ಗುರೂಜಿ ಒತ್ತಾಯಿಸಿದರು.
ಈ ಬಗ್ಗೆ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಹುಸಂಖ್ಯಾತ ಮೇಲ್ಜಾತಿಯವರನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವುದಕ್ಕೆ ನಮ್ಮ ಪರಿಶಿಷ್ಠ ಪಂಗಡದಿಂದ ವಿರೋಧಸುತ್ತೇವೆ. ಈ ಮೀಸಲಾತಿಯ ಉದ್ದೇಶವೇ ತಪ್ಪಾಗುತ್ತದೆ. ಕರ್ನಾಟಕ ಸರಕಾರವು ಶೇ.7.5 ಮೀಸಲಾತಿಯನ್ನು ಹೆಚ್ಚಿಸದೆ ವಂಚಿಸಿದೆ.ಆದ್ದರಿಂದ ಶೇ 7.5ರಷ್ಟು ಮೀಸಲಾತಿಯನ್ನು ಹೆಚ್ಚಿಸಬೇಕು ಮತ್ತು ಬಹುಸಂಖ್ಯಾತ ಮೇಲ್ಜಾತಿಯವರನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬಾರದೆಂದು ಒತ್ತಾಯ ಮಾಡುತ್ತೇವೆ ಎಂದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮೋಹನ್ ಕಿಶೋರ್, ಯೋಗೇಶ್, ರವಿಜಾನಗಿರಿ, ಸಿದ್ದೇಶ್, ಟಿ.ಎಮ್. ಯೋಗರಾಜ್ ಉಪಸ್ಥಿತರಿದ್ದರು.