
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಮಂಗಳ ಪರ್ವದಲ್ಲಿ ನಡೆಯುವ ಲಕ್ಷದೀಪೋತ್ಸವ ಸಂಭ್ರಮ ವೈಭವದಿಂದ ನಡೆಯುತ್ತಿದ್ದು. ಶನಿವಾರ ರಾತ್ರಿ ಮಂಜುನಾಥ ಸ್ವಾಮಿಯ ಲಲಿತೋದ್ಯಾನ ಉತ್ಸವ ನೇರೆವೆರಿತು.ದೇವಾಲಯದ ಒಳಗೆ ಸುತ್ತು ಬಲಿ ಉತ್ಸವದ ಬಳಿಕ ದೇವರನ್ನು ಪಲ್ಲಕ್ಕಿ ಮೂಲಕ ಭಕ್ತರ ಸಮ್ಮುಖದಲ್ಲಿ ಲಲಿತೋದ್ಯಾನ ಮಂಟಪಕ್ಕೆ ಕರೆತಂದು ವಿಶೇಷ ಪೂಜೆಯನ್ನು ನೇರೆವೆರಿಸಲಾಯಿತು. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಲಲಿತೋದ್ಯಾನ ಉತ್ಸವ ಜರಗಿತು. ಈ ಸಂದರ್ಭದಲ್ಲಿ ಮಾಣಿಲ ಶ್ರೀ ಧಾಮದ ಶ್ರೀ ಶ್ರೀ ಪರಮಹಂಸ ಮೋಹನ ದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಲಲಿತೋದ್ಯಾನ ಉತ್ಸವದ ಬಳಿಕ ದೇವಸ್ಥಾನಕ್ಕೆ ಮರಳಿದ ದೇವರನ್ನು ಬೆಳ್ಳಿ ರಥದಲ್ಲಿ ದೇವಸ್ಥಾನದ ಸುತ್ತ ಒಂದು ಸುತ್ತು ಎಳೆಯಲಾಯಿತು, ನಿಶಾನೆ,ಕೊಂಬು ,ಶಂಖ, ಕಹಳೆ ಸರ್ವ ವಾದ್ಯಘೋಷಗಳೊಂದಿಗೆ ಉತ್ಸವದ ನಡೆಯಿತು. ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಮಂಜುನಾಥ ಸ್ವಾಮಿಯ ರಥವನ್ನು ಭಕ್ತಿಭಾವದಿಂದ ಎಳೆಯುವ ಮೂಲಕ ಉತ್ಸವದಲ್ಲಿ ಭಾಗಿಯಾದರು.