Header Ads
Breaking News

ಧರ್ಮಸ್ಥಳದಲ್ಲಿ ಶಾಸನಶಾಸ್ತ್ರ-ಸ್ಥಳನಾಮ ಸಂಘಗಳ ಜಂಟಿಅಧಿವೇಶನ : ದೇವಾಲಯಗಳ ಇತಿಹಾಸ, ಶಾಸನಗಳ ಪ್ರಾಚೀನತೆ ಬಿಂಬಿಸಿದ ಗೋಷ್ಠಿ

 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕಾಲೇಜಿನಇತಿಹಾಸ ವಿಭಾಗದ ಸಹಯೋಗದೊಂದಿಗೆ ಧರ್ಮಸ್ಥಳದ ವಸಂತ ಮಹಲ್ ಸಭಾಭವನದಲ್ಲಿಆಯೋಜಿತವಾದಶಾಸನ ಶಾಸ್ತ್ರ ಸಂಘದ 45ನೇ ಮತ್ತು ಸ್ಥಳ ನಾಮ ಸಂಘದ 39ನೇ ಜಂಟಿಅಧಿವೇಶನದಲ್ಲಿ ದೇವಾಲಯಗಳ ಇತಿಹಾಸ ಮತ್ತು ಶಾಸನಗಳ ಪ್ರಾಚೀನ ವೈಶಿಷ್ಟ್ಯತೆ ಕುರಿತ ವಿಸ್ತøತ ವಿಚಾರಗಳು ಪ್ರಸ್ತುತಪಡಿಸಲ್ಪಟ್ಟವು.ನಾಗರಿಕ ಸಂಹಿತೆ ಮತ್ತು ಪೋರ್ಚುಗಿಸ್ ಶಾಸನಗಳು, ನಾಗಾವ್‍ಶಾಸನದ ಸಾಮಾಜಿಕ ಸಂಕೇತ, ಆಂಧ್ರದಇತ್ತೀಚಿನಬ್ರಾಹ್ಮೀ ಶಾಸನಗಳು,ಎರಡನೇ ಹೊಯ್ಸಳ ವೀರಬಲ್ಲಾಳ, ಸೂರ್ಯದೇವ ಮತ್ತು ಅವನ ದೇವಾಲಯದಇತಿಹಾಸ, ಹರಪ್ಪ ಶಾಸನ ಎಂಬ ವಿಷಯಗಳ ಮೇಲೆ ಪ್ರಬಂಧ ಮಂಡನೆನಡೆಯಿತು.

ಪೋರ್ಚುಗಿಸ್ ಶಾಸನಗಳಲ್ಲಿ ಮಹಿಳೆಯರಿಗೆ ನೀಡಿರುವ ಹಕ್ಕುಗಳ ಬಗ್ಗೆ ಉಲ್ಲೇಖವಿರುವುದನ್ನುಡಾ. ಸ್ವಪ್ನ ಸಮೇಲಿ ಮಂಡಿಸಿದರು. ಪೋರ್ಚುಗೀಸ್‍ಕಾಲದಲ್ಲಿ ಹೆಣ್ಣುಮಕ್ಕಳಿಗೆ ಅವರಗಂಡನ ಹಾಗೂ ತಂದೆಯ ಆಸ್ತಿಯಲ್ಲಿ ಹಕ್ಕಿತ್ತು. ಆದರೆ ಭಾರತದಲ್ಲಿ ಆ ಅವಕಾಶವಿರಲಿಲ್ಲ. ಪೋರ್ಚುಗೀಸರು ಭಾರತಕ್ಕೆ ಬಂದ ಮೇಲೆ ಮೊದಲುಗೋವಾದಲ್ಲಿ ಕ್ರಿಶ್ಚಿಯನ್ ಹೆಣ್ಣುಮಕ್ಕಳಿಗೆ ಈ ಹಕ್ಕನ್ನು ನೀಡಿದರು. ಇತ್ತೀಚೆಗೆ ಭಾರತದಎಲ್ಲಾ ಹೆಣ್ಣುಮಕ್ಕಳಿಗೆ ಈ ಹಕ್ಕು ದೊರೆತಿದೆಎಂದರು.ಡಾ. ಅನುರಾಧಾ ಕೆ ರಾನಡೆ, ಮಹಾರಾಷ್ಟ್ರದ ನಾಗಾವ್‍ನಲ್ಲಿರುವ ಶಾಸನದ ಸಾಮಾಜಿಕ ಸಂಕೇತಗಳ ಬಗ್ಗೆ ತಿಳಿಸಿದರು. 13ನೇ ಶತಮಾನದಲ್ಲಿರಚಿಸಲ್ಪಟ್ಟ ಈ ಶಾಸನ ಸಂಸ್ಕøತ ಲಿಪಿಯಲ್ಲಿದ್ದು ಮರಾಠಿ ಭಾಷೆಯಲ್ಲಿದೆ. ಬಿ. ಕೆ. ರಾಜವಾಡೆಎಂಬುವವರುಇದನ್ನು ಮೊದಲ ಬಾರಿಗೆ ಶೋಧಿಸಿದರು ಎಂದರು.

ಇತ್ತೀಚೆಗೆಆಂಧ್ರದಲ್ಲಿದೊರೆತ ಬ್ರಾಹ್ಮೀ ಶಾಸನಗಳ ಕುರಿತಾಗಿಡಾ. ಕೆ. ಮಣಿರತ್ನಂ ವಿಷಯ ಮಂಡಿಸಿದರು. ಶಾತವಾಹನರಾಜಕುಮಾರಹಕುಸಿರಿಯ ಮುಕ್ಕಾರೋಪೆಟ್ ಶಾಸನ, ಫಣಗಿರಿಯಅಯ್ಕಾ ಪಿಲ್ಲರ್ ಹಾಗೂ ಬ್ರಾಹ್ಮೀ ಶಾಸನ, ಶಾತವಾಹನರಾಜ ವಿಜಯನಚೆಬ್ರೋಲು ಶಾಸನದಕುರಿತಾಗಿಚಿತ್ರಸಹಿತವಾಗಿ ವಿವರಿಸಿದರು. ತಮಿಳು ಶಾಸನಗಳಲ್ಲಿರುವ ಸೂರ್ಯದೇವ ಹಾಗೂ ಅವನ ದೇವಾಲಯಗಳ ಇತಿಹಾಸದಕುರಿತಾಗಿಡಾ. ಕೆ. ಪನ್ನೀರ್ ಸೆಲ್ವಂ ವಿಷಯ ಮಂಡಿಸಿದರು. ಅಷ್ಟಮೂರ್ತಿಗಳಲ್ಲಿ ಸೂರ್ಯನು ಪ್ರಮುಖನಾದವನು. ಆಕಾಶ, ವಾಯು, ಬೆಂಕಿ, ಚಂದ್ರ, ನೀರು, ಭೂಮಿ ಹಾಗೂ ಆತ್ಮ ಇನ್ನುಳಿದವು. ಸೂರ್ಯನಿಗೆ ತಮಿಳುನಾಡಿನಲ್ಲಿ ಪ್ರಮುಖ ಸ್ಥಾನವಿದೆ. ಸೂರ್ಯನಿಗಾಗಿ ಪ್ರತ್ಯೇಕದೇವಾಲಯಅಥವಾ ಶಿವನ ದೇವಾಲಯಗಳಲ್ಲಿ ಅವನಿಗೆ ಸ್ಥಾನವಿದೆಎಂದರು.
ವರದಿ: ಅನುಪ್ರಿಯ ಮತ್ತು ವರ್ಷಾ.
ಚಿತ್ರ: ಅಕ್ಷಯ್ ಹೆಗ್ಡೆ.

Related posts

Leave a Reply

Your email address will not be published. Required fields are marked *