Header Ads
Breaking News

ಧರ್ಮಸ್ಥಳದಲ್ಲಿ ಶಾಸನಶಾಸ್ತ್ರ-ಸ್ಥಳನಾಮ ಸಂಘದ ಜಂಟಿ ಅಧಿವೇಶನ : ಸ್ಥಳನಾಮ ವ್ಯುತ್ಪತ್ತಿ ವಿವರಗ¼ನ್ನು ದಾಖಲಿಸಿದ ವಿಚಾರಗೋಷ್ಠಿ

ಧರ್ಮಸ್ಥಳ, ಫೆ.28: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಧರ್ಮಸ್ಥಳದ ವಸಂತ ಮಹಲ್ ಸಭಾ ಭವನದಲ್ಲಿ ಆಯೋಜಿತವಾದ ಶಾಸನ ಶಾಸ್ರ್ತ ಸಂಘದ 45 ನೇ ಮತ್ತು ಸ್ಥಳ ನಾಮಸಂಘದ 39 ನೇ ಜಂಟಿ ಅಧಿವೇಶನದ ಎರಡನೇ ಗೋಷ್ಠಿಯಲ್ಲಿ ಶಿಲಾಹಾರ್ ರಾಜರ ಕಲ್ಲಿನ ಶಿಲಾಶಾಸನಗಳು, ವಾಣಿಯಂಬಾಡಿ ಶಿಲಾಶಾಸನಗಳು, ಅವುಗಳ ಹಿನ್ನಲೆ ಮತ್ತು ಕಾಶ್ಮೀರ ಹೆಸರಿನ ವ್ಯುತ್ಪತ್ತಿ ಕುರಿತು ಪ್ರಬಂಧಗಳನ್ನು ಮಂಡಿಸಲಾಯಿತು.

ಪಂಕಜ್ ವಿಜಯ್, ಶಿಲಾಹಾರ್ ರಾಜರ ಶಿಲಾಶಾಸನಗಳು ಹಾಗೂ ಅವುಗಳ ಮಾಹಿತಿಯನ್ನು ಚಿತ್ರಗಳ ಮೂಲಕ ಅವುಗಳ ಬಗ್ಗೆ ವಿವರಿಸಿದರು. ಛತ್ರಪತಿ ಶಿವಾಜಿ ಶಿಲಾಶಾಸನವು ಪುರಾತನವಾಗಿದ್ದು, ಇದು ಶಿಲಾಹಾರ್ ಸಾಮ್ರಾಜ್ಯದ ಏಕೈಕ ಶಿಲಾಶಾಸನವಾಗಿದೆ ಎಂದರು.

ವನಿಯಂಬಾಡಿ ಶಿಲಾಶಾಸನದ ಇತಿಹಾಸ, ಆ ಹೆಸರಿನ ಅರ್ಥ ಮತ್ತು ಉಲ್ಲೇಖಗಳ ಕುರಿತಾಗಿ ಎಂ. ಗಾಂಧಿಯವರು ವಿಚಾರ ಮಂಡಿಸಿದರು. ವಾಣಿ ಎಂದರೆ ಸರಸ್ವತಿ, ತಮಿಳಿನಲ್ಲಿ ಪಾಡಿ ಎಂದರೆ ಹಾಡಿದರು, ಈ ಊರಿನಲ್ಲಿ ಸರಸ್ವತಿಯೇ ಹಾಡಿರುವುದರಿಂದ ವಣಿಯಂಬಾಡಿ ಹೆಸರು ಹುಟ್ಟಿಕೊಂಡಿತು. ಅಲ್ಲಿ ವ್ಯಾಪಾರಿ ಸಮುದಾಯದವರೇ ಇರುತ್ತಿದ್ದರು ಎಂದರು.
ಜಯಲಕ್ಷ್ಮೀ ಯಜ್ಞಸ್ವಾಮಿ, ಕಾಶ್ಮೀರ ಹೆಸರಿನ ವ್ಯುತ್ಪತ್ತಿ ಕುರಿತು ತಿಳಿಸಿದರು. ಕಾಶ್ಮೀರಕ್ಕೆ ಕಶ್ಯಪ ಮುನಿಯಿಂದ ಈ ಹೆಸರು ಬಂತು, ಅಲ್ಲಿನ ಜನರನ್ನು ಕಾಶ್ಯಪಕರು ಎನ್ನುತ್ತಾರೆ. ಮಹಾಕವಿ ಕಾಳಿದಾಸನು ಇಲ್ಲಿಯೇ ಜನಿಸಿದ್ದು ಎಂದರು.

ವರದಿ: ತೇಜಸ್ವಿನಿ, ಮೇಘನಾ ಹೆಗಡೆ
ಚಿತ್ರ: ಸುಮುಖ ಹೆಗಡೆ

Related posts

Leave a Reply

Your email address will not be published. Required fields are marked *