Header Ads
Breaking News

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಶಾಲೆಯಲ್ಲಿ ಮಾದರಿ ವಿದ್ಯುನ್ಮಾನ ಮತ ಯಂತ್ರ ಬಳಸಿ ಚುನಾವಣೆ.

ಧರ್ಮಸ್ಥಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿರುತ್ತಾರೆ. ಅವರ ಪ್ರತಿಯೊಂದು ಮತಕ್ಕೂ ಬಹಳ ಮಹತ್ವವಿದೆ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೂ ಚುನಾವಣಾ ಮಹತ್ವದ ಅರಿವಿರಬೇಕು ಎನ್ನುವ ನಿಟ್ಟಿನಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿ. ಪ್ರಾ. ಶಾಲೆಯಲ್ಲಿ ಚುನಾವಣೆಯನ್ನು ಮಾದರಿ ಇ.ವಿ.ಎಂ. ಮೂಲಕ ಕೈಗೊಳ್ಳಲಾಯಿತು.

ಶಾಲೆಯ ಮುಖ್ಯೊಪಾಧ್ಯಾಯ ಸುಬ್ರಹ್ಮಣ್ಯ ರಾವ್ ಇವರ ಸೂಕ್ತ ನೇತೃತ್ವದಲ್ಲಿ ಮತ್ತು ಚುನಾವಣಾಧಿಕಾರಿಯಾಗಿ ನೇಮಕಗೊಂಡ ಸಹಶಿಕ್ಷಕಿ ಪೂರ್ಣಿಮಾ ಜೋಷಿ ಮುಂದಾಳತ್ವದಲ್ಲಿ ಸುಸೂತ್ರವಾಗಿ ಚುನಾವಣಾ ಪ್ರಕ್ರಿಯೆ ನೆರವೇರಿತು. ನಾಮಪತ್ರ ಸಲ್ಲಿಕೆಯಿಂದ ಹಿಡಿದು ಫಲಿತಾಂಶ ಘೋಷಣೆವರೆಗೂ ಮತದಾನ ಸರ್ಕಾರದ ರೀತಿಯಲ್ಲೇ ನಡೆದದ್ದು ಗಮನಾರ್ಹ. ಈ ಮಾದರಿ ಮತಯಂತ್ರದ ಪರಿಕಲ್ಪನೆಯ ರೂವಾರಿ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕ ನಿಖಿತ್ ಜೈನ್ ಇವರು.

4ನೇ ತರಗತಿಯಿಂದ 7ನೇ ತರಗತಿಯವರೆಗಿನ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲಾ ನಾಯಕನನ್ನು ಆರಿಸುವ ಈ ಚುನಾವಣಾ ಹಬ್ಬದಲ್ಲಿ ಪಾಲ್ಗೊಂಡು ಶಾಲಾ ಸರ್ಕಾರ ರಚನೆಗೆ ಕಾರಣೀಭೂತರಾದರು. ಅಂತಿಮವಾಗಿ ವಿಕಾಸ್ ನಾಯಕನಾಗಿ ಹಾಗೂ ಪ್ರಜ್ಞಾ ಉಪನಾಯಕಿಯಾಗಿ ಆಯ್ಕೆಗೊಂಡರು.

Related posts

Leave a Reply

Your email address will not be published. Required fields are marked *