Header Ads
Header Ads
Breaking News

ಧರ್ಮಸ್ಥಳ : ರತ್ನಗಿರಿಯಲ್ಲಿ ವಿರಾಗಿಗೆ ಪಾದಪೂಜೆ

ಧರ್ಮಸ್ಥಳ, ಫೆ.13: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಜ್ಜನದ ಸಂಭ್ರಮ. ಬಾಹುಬಲಿಯ ಬೆಟ್ಟದಲ್ಲಿ ಪೂಜಾ ವಿಧಿವಿಧಾನಗಳು ಭರದಿಂದ ಸಾಗುತ್ತಿದ್ದು, ವೈರಾಗ್ಯ ಮೂರ್ತಿ ಪಾದಗಳಿಗೆ ಪ್ರತಿದಿನ ಅಭಿಷೇಕಗಳು ನಡೆಯುತ್ತಿವೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಕಡೆಗಳಿಂದ ಜನ ಸಾಗರವೆ ಧರ್ಮಸ್ಥಳಕ್ಕೆ ಹರಿದು ಬರುತ್ತಿದೆ.
ಹತ್ತು ದಿವಸಗಳ ಮಹಾಮಜ್ಜನದಲ್ಲಿ ಐದು ದಿನ ಪೂರ್ಣಗೊಂಡಿದ್ದು ಇಡೀ ಧರ್ಮಸ್ಥಳ ಹಬ್ಬದ ಸಂಭ್ರಮದಲ್ಲಿ ಮೀಂದೇಳುತ್ತಿದೆ. ಮುಂಜಾನೆಯಿಂದಲೇ ಭಗವಾನ್ ಬಾಹುಬಲಿಗೆ ಅಭಿಷೇಕಾ, ಪೂಜಾ ವಿಧಿವಿಧಾನ, ಯಜ್ಞ ಯಾಗಾದಿಗಳು ನಡೆಯುತ್ತಿದೆ. ಜೈನ ಮುನಿಗಳ ಸಮ್ಮುಖದಲ್ಲಿ ಬಾಹುಬಲಿಯ ಆರಾಧನೆ ನಡೆಯುತ್ತಿದೆ.

ಈ ತಿಂಗಳ 15 ತಾರೀಕಿನವರೆಗೆ ಬಾಹುಬಲಿ ಸ್ವಾಮಿಯ ಪಾದಗಳಿಗೆ ಕುಂಕುಮ, ಚಂದನ, ಎಳನೀರು, ಕಲಶಾಷೇಕಗಳು ನಡೆಯಲಿದೆ ಹಾಗು 16ರಿಂದ 19ನೇ ತಾರೀಕಿನವರೆಗೆ ಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ.

ಈ ವೇಳೆ ಹೆಗ್ಗಡೆ ಕುಟುಂಬಸ್ಥರಿಂದ ಬಾಹುಬಲಿಗೆ ಜಲಾಭಿಷೇಕ, ಕಬ್ಬಿನ ಹಾಲು, ಸೀಯಾಳ, ಕಷಾಯ, ಕುಂಕುಮ ಚಂದನದ ಅಭಿಷೇಕ ನಡೆಯಲಿದೆ. ಜೈನ ಮುನಿಗಳ ಆದೇಶದಂತೆ ಪ್ರಾತಃಕಾಲದಲ್ಲಿಯೇ ಅಭಿಷೇಕಾದಿ ಕ್ರಿಯೆಗಳು ನಡೆಯಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಲಿದ್ದಾರೆ.

ಧೃತಿ ಅಂಚನ್
ಪತ್ರಿಕೋದ್ಯಮ ಹಾಗೂ ಸಮೂಹ ಮಾಧ್ಯಮ ವಿಭಾಗ
ಎಸ್‍ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ

Related posts

Leave a Reply