Header Ads
Header Ads
Breaking News

ನಗರದ ತೊಕ್ಕೊಟ್ಟು ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ : ಆರೋಪಿಗಳಿಂದ 2,00,000 ರೂ. ಮೌಲ್ಯದ ಗಾಂಜಾ ವಶ

ಮಂಗಳೂರು ನಗರದ ತೊಕ್ಕೊಟ್ಟು ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ದಕ್ಷಿಣ ಉಪವಿಭಾಗದ ಎಸಿಪಿಯವರ ನೇತೃತ್ವದಲ್ಲಿ ಉಪವಿಭಾಗದ ರೌಡಿ ನಿಗ್ರಹ ದಳವು ಬಂಧಿಸಿದೆ ಎಂದು ನಗರ ಪೋಲಿಸ್ ಆಯುಕ್ತರಾದ ಡಾ.ಹರ್ಷ.ಪಿ.ಎಸ್ ತಿಳಿಸಿದರು.

 ಮಂಗಳೂರಿನ ಪೋಲಿಸ್ ಆಯುಕ್ತ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಗರದಲ್ಲಿ ಈಗಾಗಲೇ ಡ್ರಗ್ ಮಾಫಿಯಾ ವನ್ನು ನಿರ್ಗಹಿಸಲು ಅನೇಕ ಕಾರ್ಯಚರಣೆಯನ್ನು ಕೈಗೊಂಡು ಆನೇಕ ಜನರನ್ನು ವಶಕ್ಕೆ ಪಡೆದುಕೊಂಡಿದ್ದವೆ.ಇಂದು ಮಂಜೇಶ್ವರದ ಮಜಿರ್ ಪಳ್ಳ ಧರ್ಮನಗರದ ಅಬೂಬಕ್ಕರ್ ಸಮದ್ ಅಲಿಯಾಸ್ ಸಮದ್ (24), ಮಂಜೇಶ್ವರ ವರ್ಕಾಡಿ ಗ್ರಾಮದ ಮಹಮದ್ ಅಸ್ರಫ್ ಅಲಿಯಾಸ್ ಆಶ್ರಫ್ (30), ಮಂಜೇಶ್ವರ ಕಡಂಬಾರು ಅಂಚೆ ದುರ್ಗಿಪಳ್ಯ ಮನೆಯ ಮಹಮದ್ ಅಫ್ರಿದ್ (22), ಮಂಜೇಶ್ವರ ಕಡಂಬಾರು ಅಂಚೆ ಮುಕ್ತಾನ ಮನೆಯ ಮಹಮದ್ ಅರ್ಷ್ದ್ (18) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ 2,00,000 ರೂ. ಮೌಲ್ಯದ ಗಾಂಜಾ, 2,50,000 ರೂ. ಮೌಲ್ಯದ ಹುಂಡೈ ಐ-20 ಕಾರು, 50,000 ರೂ. ಮೌಲ್ಯದ ಎಕ್ಸಿಸ್ ಸ್ಕೂಟರ್ ಮತ್ತು 3 ಮೊಬೈಲ್ ಗಳು ಸೇರಿದಂತೆ ಒಟ್ಟು 5,00,000  ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಇನ್ನು ಶಾಲಾ, ಕಾಲೇಜ್ ಹಾಗೂ ಹಾಸ್ಟೆಲ್‌ಗಳ ಸಂಬಂಧ ಪಟ್ಟವರು ತಮ್ಮ ಪರಿಸರದಲ್ಲಿ ಇಂತಹಾ ಚಟುವಟಿಕೆಗಳ ಬಗ್ಗೆ ನಿಗ ವಹಿಸಬೇಕು, ಈಗಾಗಲೇ ಆನೇಕ ಕಾಲೇಜಿನ ವಿದ್ಯಾರ್ಥಿಗಳು ಈ ಚಟಕ್ಕೆ ಬಲಿಯಾಗಿದ್ದರೆ. ನಗರದಲ್ಲಿ ಇಂತಹಾ ಚಟುವಟಿಕೆಗಳನ್ನೂ ಸಂರ್ಪೂವಾಗಿ ನಿಯಂತ್ರಿಸಲು ಮುಂದಾಗಿದ್ದವೆ,ಈ ಸಂದಂರ್ಭದಲ್ಲಿ ಯಾವುದೇ ಮುಲಾಜಿಲ್ಲದೆ ವಶಕ್ಕೆ ಪಡೆದುಕೊಳ್ಳತ್ತೆವೆ, ಯಾವುದೆ ಹಣದ ಆಮಿಷಕ್ಕೆ ಬಲಿಯಾದಿರಿ ಎಂದು ಸೂಚನೆ ನೀಡಿದರು.

Related posts

Leave a Reply

Your email address will not be published. Required fields are marked *