Header Ads
Breaking News

ನಮಗೂ ವೈಭವದ ದಸರಾ ಆಚರಣೆ ಬೇಕು : ಮೈಸೂರಿನ ಜತೆ ಮಂಗಳೂರಿನಲ್ಲೂ ಹೆಚ್ಚಿದ ಬೇಡಿಕೆ

ಮೈಸೂರು ದಸರಾವನ್ನು ಎಂದಿನ ಸಾಂಪ್ರದಾಯಿಕ ವೈಭವದೊಂದಿಗೆ ಆಚರಿಸಬೇಕೆಂಬ ಜನರ ಬೇಡಿಕೆ ಸರಕಾರ ಪೂರಕವಾಗಿ ಸ್ಪಂದಿಸುವ ಸೂಚನೆ ದೊರಕಿದೆ. ಈ ನಡುವೆ ರಾಜ್ಯದ ಇತರ ಭಾಗಗಳಲ್ಲೂ ವೈಭವದ ಆಚರಣೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಲು ಮುಂದಾಗಿದೆ.

ಕೋವಿಡ್ ಸೃಷ್ಟಿಸಿದ ಆರ್ಥಿಕ ಸಂಕಷ್ಟ ಮತ್ತು ಆತಂಕಗಳಿಂದ ಹೊರಬರಲು ಮೈಸೂರು ದಸರೆಯ ಮುಕ್ತ ಆಚರಣೆ ಸೂಕ್ತ ಎಂಬ ಅಭಿಪ್ರಾಯ ಬಲವಾಗಿದೆ. ಮೈಸೂರಿನಂತೆಯೇ ಮಡಿಕೇರಿ, ಮಂಗಳೂರಿನ ಕುದ್ರೋಳಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಪ್ರತೀ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ವರ್ಷವೂ ಅದನ್ನು ಮುಂದುವರಿಸಲು ಅವಕಾಶ ಬೇಕೆಂದು ಸ್ಥಳೀಯರು ಕೇಳುತ್ತಿದ್ದಾರೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಳದಲ್ಲಿ ಪ್ರತಿಷ್ಠಾಪಿಸಲಾಗುವ ಗಣಪತಿ, ಸರಸ್ವತಿ ಮತ್ತು ನವದೇವಿಯರ ಮೂರ್ತಿಯವರ ವೈಭವಕ್ಕೆ ರಾಜ ಕಳೆಯಿತ್ತು. ದೇವಸ್ಥಾನದಲ್ಲಿ ಮಾತ್ರವಲ್ಲ ಬೀದಿ ಬೀದಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತದೆ.ನವ ದಿನಗಳಲ್ಲೂ ಹುಲಿ ವೇಷ, ಕರಡಿ ಕುಣಿತ ಮೇಳೈಸುತ್ತದೆ. ಈ ವರ್ಷವೂ ಮಂಗಳೂರಿನ ಕುದ್ರೋಳಿ ದಸರಾಗೆ ಅವಕಾಶ ಮಾಡಿಕೊಡಬೇಕೆಂದು ಸ್ಥಳೀಯರು ಮನವಿ ನೀಡಲು ಮುಂದಾಗಿದ್ದಾರೆ.

Related posts

Leave a Reply

Your email address will not be published. Required fields are marked *