Header Ads
Breaking News

ನಮ್ಮ ಸಮಾಜಕ್ಕೆ ಮಿಥುನ್ ರೈ ಅವಮಾನ ಮಾಡಿಲ್ಲ : ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಹರಿನಾಥ್ ಹೇಳಿಕೆ

ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿಕೆಯಿಂದ ಜೋಗಿ ಸಮುದಾಯಕ್ಕೆ ಯಾವುದೇ ಅವಮಾನ ಆಗಿಲ್ಲ ಎಂದು ಜೋಗಿ ಸಮುದಾಯ ಮುಖಂಡ ಮತ್ತು ಮನಪಾ ಮಾಜಿ ಮೇಯರ್ ಹರಿನಾಥ್ ಹೇಳಿದರು.ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತ್ರಾಸ್‍ನಲ್ಲಿ ನಡೆದ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿಕೆ ವಿರೋಧಿಸಿ ವ್ಯಾಪಕ ಟೀಕೆಗಳು ಬರುತ್ತಿದೆ. ನಮ್ಮ ಸಮಾಜಕ್ಕೆ ಮಿಥುನ್ ರೈ ಅವಮಾನ ಮಾಡಿಲ್ಲ. ಕಿರಣ್ ಜೋಗಿ ಹೇಳಿಕೆಗೆ ಹರಿನಾಥ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕಿರಣ್ ಜೋಗಿ ಓರ್ವ ಸ್ವಯಂ ಘೋಷಿತ ಅಧ್ಯಕ್ಷನಷ್ಟೇ. ಯಾವುದೇ ಚುನಾವಣೆ ಎದುರಿಸಿ ಅಧ್ಯಕ್ಷರಾಗಿಲ್ಲ. ಜೋಗಿ ಸಮುದಾಯದ ಸಮಸ್ಯೆಯನ್ನು ಯಾರೂ ಕೂಡ ಆಲಿಸುವುದಿಲ್ಲ. ಈಗ ಮಿಥುನ್ ರೈ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವುದು ಖಂಡನೀಯ. ಇದು ರಾಜಕೀಯ ಪ್ರೇರಿತ ಹೇಳಿಕೆ ಎಂದು ಹರಿನಾಥ್ ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್. ಲೋಬೋ, ಶಶಿಧರ್ ಹೆಗ್ಡೆ, ಟೀಕೆ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *