Header Ads
Breaking News

ನಳಿನ್ ಇಸ್ಪೀಟ್ ಎಲೆಗಳ ನಡುವೆ ಜೋಕರ್ ಇದ್ದ ಹಾಗೆ; ಮಾಜಿ ಸಂಸದ ಉಗ್ರಪ್ಪ ಲೇವಡಿ

ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಒಬ್ಬರು ಇಸ್ಪೀಟ್ ಎಲೆಗಳ ನಡುವೆ ಜೋಕರ್ ಇದ್ದಂತೆ, ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ಉಗ್ರಪ್ಪ ಲೇವಡಿ ಆಡಿದ್ದಾರೆ.

ಬೋಳಿಯಾರ್‍ನಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಕೇಂದ್ರ ಸರಕಾರದ ಪೌರತ್ವ ಕಾಯ್ದೆಯ ವಿರುದ್ದ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಭಾರತದ ರಾಜಕಾರಣ ನಿಯಂತ್ರಿಸುತ್ತಿದ್ದವರು ಮಂಗಳೂರಿನ ಜನ. ದ.ಕ ಜಿಲ್ಲೆಯ ಜನ ಪ್ರಾಮಾಣಿಕರು, ಬುದ್ಧಿಜೀವಿಗಳು ಎಂದು ಎಲ್ಲರೂ ತಿಳಿದು ಕೊಂಡಿದ್ದೆವು. ಮತೀಯ ಶಕ್ತಿಗಳಾದ ಬಿಜೆಪಿ-ಆರ್‍ಎಸ್‍ಎಸ್ ಮಾತಿಗೆ ಬೆಲೆ ಕೊಟ್ಟು ಅವರಿಗೆ ಬಹುತೇಕ ಸ್ಥಾನಗಳನ್ನು ಜಿಲ್ಲೆಯ ಜನ ನೀಡಿದ್ದೀರಿ. ಆದರೆ ಈ ಭಾಗದ ಶೋಷಿತ, ಬಡ, ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನ್ಯಾಯ ಕೇಳುವವರಿಗೆ ಬಿಜೆಪಿ ಕೊಟ್ಟಿರುವ ದೇಣಿಗೆ ಏನೂ ಇಲ್ಲ. ಈವರೆಗೂ ಬಿಜೆಪಿಯವರು ಜಿಲ್ಲೆಯ ಜನರ ಜೀವನ ಹಸನು ಮಾಡಲು ಯಾವುದೇ ಯೋಜನೆ ಜಾರಿಗೆ ತಂದಿಲ್ಲ ಎಂದು ಹೇಳಿದ್ದರು.

ದಲಿತ ಮುಖಂಡರಾದ ಬಿ.ಆರ್.ಭಾಸ್ಕರ ಪ್ರಸಾದ್ ಮಾತನಾಡಿ, ನಾವೆಲ್ಲರೂ ಒಟ್ಟಾದರೆ ಖಂಡಿತಾ ಈ ಕಾಯ್ದೆಯ ಜಾರಿ ಖಂಡಿತವಾಗಿಯೂ ಸಾಧ್ಯವಿಲ್ಲ. ಈ ದೇಶದ್ರೋಹಿ ಕಾಯಿದೆಗಳ ಹಿಂದೆ ಆಡಳಿತದ ಹಿಡನ್ ಅಜೆಂಡವನ್ನು ಅರ್ಥಮಾಡಿಕೊಳ್ಳಬೇಕು. ಮಂಗಳೂರಿನಲ್ಲಿ ನಡೆದ ಗೋಲಿಬಾರ್‍ಗೆ ಕಾರಣ ಏನು? ಇದರ ಹಿಂದೆ ಯಾರಿದ್ದಾರೆ ಎಂಬುದರ ಸತ್ಯಾಸತ್ಯತೆ ಹೊರಗೆ ಬರಬೇಕು ಎಂದು ಹೇಳಿದರು.

ಬೋಳಿಯಾರ್ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ಖಾದರ್ ಅಶ್ಯಾಫಿ, ಬೋಳಿಯಾರ್ ಸಂರಕ್ಷಣಾ ಸಮಿತಿಯ ಸಂಚಾಲಕರಾದ ಹಾಜಿ ಅಬ್ದುಲ್ ಲತೀಫ್, ಅಮ್ಮೆಂಬಳ ಜಾರದಗುಡ್ಡೆ ಆಮೀರ್ ತಂಞಳ್ ದುವಾ, ಶಾಸಕ ಯು.ಟಿ.ಖಾದರ್, ಎಸ್ ಡಿಪಿಐ ಕಾರ್ಯದರ್ಶಿ ಅಶ್ರಫ್ ಮಾಚಾರ್, ಎಸ್ ಎಸ್ ಎಫ್ ಉಪಾಧ್ಯಕ್ಷರಾದ ಸುಫ್ಯಾನ್ ಸಖಾಫಿ, ಉದ್ಯಮಿ ಶಾಫಿ ಹಾಜಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ ಮಿತ್ತಕೋಡಿ, ಮುಖಂಡ ಇಬ್ರಾಹಿಂ ಖಲೀಲ್ ತಲಪಾಡಿ, ನೌಫಲ್ ಕೆ.ಬಿ.ಎಸ್ ಮೊದಲಾದವರು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *