Header Ads
Header Ads
Breaking News

ನಳಿನ್ ಕುಮಾರ್‌ಗೆ ರಾಜ್ಯದ ಬಗ್ಗೆ ಏನೂ ಗೊತ್ತಿಲ್ಲ : ಮಂಗಳೂರಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ

ನಳಿನ್ ಕುಮಾರ್ ಕಟೀಲ್ ಕರ್ನಾಟಕದಲ್ಲಿ 34 ಜಿಲ್ಲೆ ಇದೆ ಎಂಬ ಹೇಳಿಕೆಗೆ ಮಂಗಳೂರಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಳಿನ್ ಅವರಿಗೆ ಮಂಗಳೂರು ಮಾತ್ರ ಗೊತ್ತು, ಮಂಗಳೂರು ಬಿಟ್ಟು ಅವರಿಗೆ ಏನೂ ಗೊತ್ತಿಲ್ಲ. ಅವರಿಗೆ ಕನಿಷ್ಠ ಜ್ಞಾನ ಕೂಡ ಇಲ್ಲ ಅಂತಾ ನಳಿನ್ ವಿರುದ್ಧ ಸಿದ್ಧರಾಯ್ಯ ಕಿಡಿಕಾರಿದರು. ಇನ್ನು  ಮಹಾರಾಷ್ಟ್ರಕ್ಕೆ ಕರ್ನಾಟಕದ ನೀರು ನೀಡುತ್ತೇನೆ ಎಂಬ ಸಿಎಂ ಬಿಎಸ್‌ವೈ ಹೇಳಿಕೆ , ಕೇವಲ ಚುನಾವಣೆಗಾಗಿ ನೀರು ಬಿಡುತ್ತೇವೆ ಅಂತಾ ಹೇಳಿರಬಹುದು ಅಷ್ಟೇ , ಎರಡು ರಾಜ್ಯದ ನಡುವೆ ಮಾತುಕತೆಯಾಗದೇ ಹಾಗೇ ಏನು ಮಾಡಲು ಆಗುವುದಿಲ್ಲ ಅಂತಾ ತಿಳಿಸಿದರು.
ಬಿಜೆಪಿ ಸರಕಾರವನ್ನು ಯಾರು ಕೇಳುವವರು, ಹೇಳುವವರು ಇಲ್ಲ, ಸರಕಾರದಿಂದ ವರ್ಗಾವಣೆ ದಂದೆಯಾಗುತ್ತಿದೆ ಅಷ್ಟೇ, ಬೇರೆ ಏನು ಪ್ರಗತಿ ಆಗುತ್ತಿಲ್ಲ.ಪ್ರವಾಹ ಬಂದಿರುವಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ.ಎಲ್ಲರೂ ಮಹಾರಾಷ್ಟ್ರ, ಮನೆಯಲ್ಲಿ ನೆಮ್ಮದಿಯಾಗಿ ಇದ್ದಾರೆ .. ಸರಕಾರ ಸಂಪೂರ್ಣ ಹದಗೆಟ್ಟು ಹೋಗಿದೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

Related posts

Leave a Reply

Your email address will not be published. Required fields are marked *