Header Ads
Breaking News

ನವಮಂಗಳೂರು ಬಂದರಿನಲ್ಲಿ ಕನ್ನಡ ರಾಜ್ಯೋತ್ಸವ

ನವಮಂಗಳೂರು ಬಂದರು ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಎನ್ ಎಂಪಿಟಿ ಅಧ್ಯಕ್ಷ ಎ.ವಿ ರಮಣ ಅವರು ಧ್ವಜಾರೋಹಣ ನೆರವೇರಿಸಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಷನೆ ಸಲ್ಲಿಸಿದರು.ಕನ್ನಡ ಮಾಧ್ಯಮ ಮತ್ತು ಕನ್ನಡದಲ್ಲಿ ಅತೀ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಿದರು.ಬಳಿಕ ಮಾತನಾಡಿದ ಅವರು ಬಂದರು ಮಂಡಲಿಯಲ್ಲಿ ಕನ್ನಡ ಭಾಷೆಯ ಬಳಕೆಗೆ ಪ್ರೋತ್ಸಾಹ  ನೀಡುತ್ತಾ ಬರುತ್ತಿದ್ದೇವೆ. ಕನ್ನಡ ಉಳಿಸಿ ಬೆಳೆಸಲು ದೃಢ ಸಂಕಲ್ಪ ಅಗತ್ಯ.ಕರ್ನಾಟಕದ ಮಂಗಳೂರು ಪ್ರಮುಖ ನಗರವಾಗಿದ್ದು ಬಂದರು, ಎಂಆರ್‍ಪಿಎಲ್ ನಂತಹ ಬೃಹತ್ ಸಂಸ್ಥೆಗಳಿವೆ ಎಂದರು.ಕನ್ನಡ ಸುಂದರ ಭಾಷೆಯಾಗಿದ್ದು ಅನೇಕ ಕವಿಗಳು, ರಾಜರು ಕಲೆ ಸಂಸ್ಕ್ರತಿ ,ಕನ್ನಡ ಭಾಷೆಗೆ ಒತ್ತು ನೀಡಿದ್ದರು.ಕೃಷ್ಣದೇವರಾಯ ತುಳುವನಾಗಿ ಕನ್ನಡ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ.ನಾನಾ ನೆರೆಯ ಅಂಧ್ರದವನಾದರೂ ತೆಲುಗು ಕನ್ನಡಕ್ಕೆ ಸ್ವಲ್ಪ ಸಾಮ್ಯತೆಯಿದೆ. ಎರಡೂ ಭಾಷೆ ಗಳಲ್ಲಿ ಬರೆದ ಕವಿಗಳಿದ್ದಾರೆ ಎಂದು ಸ್ಮರಿಸಿಕೊಂಡರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ನಾಥ್,ಟ್ರಾಫಿಕ್ ವಿಭಾಗದ ಬೆಳಗಲಿ,ಕನ್ನಡ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *