Header Ads
Header Ads
Header Ads
Breaking News

ನವೀಕೃತ ಎಸ್‌ಎಮ್‌ಎಸ್ ಚರ್ಚ್‌ನ ನೂತನ ದೇವಾಲಯ ಲೋಕಾರ್ಪಣೆ- ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ

ಕುಂದಾಪುರ: 129 ವರ್ಷ ಹಳೆಯದಾದ ಬ್ರಹ್ಮಾವರದ ಸೈಂಟ್ ಮೇರೀಸ್ ಸಿರಿಯನ್ ಕ್ಯಾಥ್ರಡಲ್ ನ ನವೀಕೃತ ದೇವಾಲಯ ಕಟ್ಟಡದ ಉದ್ಘಾಟನೆ ಹಾಗೂ ಆಶೀರ್ವಚನ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ದೊರಕಿತು.

ಮಧ್ಯಾಹ್ನ ಮೂರುಗಂಟೆಗೆ ಬ್ರಹ್ಮಾವರದ ಬ್ರಹ್ಮಾವರದ ಗಾಂಧಿ ಮೈದಾನದಿಂದ ಆಕರ್ಷಕ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆದಿದ್ದು. ಈ ಮೆರವಣಿಗೆಗೆ ಬ್ರಹ್ಮಾವರ ಸೀರಿಯನ್ ಓರ್ಥೊಡಕ್ಸ್ ಧರ್ಮಪ್ರಾಂತ್ಯದ ಮೆಟ್ರೋಪಾಲಿಟನ್ ವಂ. ಯಾಕೂಬ್ ಮಾರ್ ಇಲಿಯಾಸ್ ಅವರು ಚಾಲನೆ ನೀಡಿದರು. ನಂತರ ಹೊರೆ ಕಾಣಿಕೆ ಮೆರವಣಿಗೆಯು ಆಕಾಶವಾಣಿ ಜಂಕ್ಷನ್, ಬ್ರಹ್ಮಾವರ ರಥಬೀದಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾಗಿ ಕ್ಯಾಥೆಡ್ರಲ್ ಗೆ ತಲುಪಿತು.

ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಚರ್ಚಿನ ಸಹಸ್ರಾರು ಭಕ್ತರು, ಸ್ಥಳೀಯ ಚರ್ಚುಗಳ ಸದಸ್ಯರು, ಆಗಮಿಸಿ ಹೊರೆಕಾಣಿಕೆಯನ್ನು ಸಮರ್ಪಿಸಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹೊರೆ ಕಾಣಿಕೆಯಲ್ಲಿ ನಾಸಿಕ್ ಬ್ಯಾಂಡ್, ಹುಲಿವೇಷ, ಟ್ಯಾಬ್ಲೊಗಳು, ಬ್ರಾಸ್ ಬ್ಯಾಂಡ್, ಗಮನ ಸೆಳೆಯಿತು.

ಚರ್ಚಿಗೆ ಆಗಮಿಸಿದ ಹೊರೆಕಾಣಿಕೆಗಳನ್ನು ಕೊಲ್ಕತ್ತಾ ಧರ್ಮಪ್ರಾಂತ್ಯದ ಬಿಷಪ್ ಜೋಸೆಫ್ ಮಾರ್ ದಿಯಾನಿಯೊಸ್, ಬ್ರಹ್ಮಾವರ ಸೀರಿಯನ್ ಓರ್ಥೊಡಕ್ಸ್ ಧರ್ಮಪ್ರಾಂತ್ಯದ ಮೆಟ್ರೋಪಾಲಿಟನ್ ವಂ. ಯಾಕೂಬ್ ಮಾರ್ ಇಲಿಯಾಸ್, ಬ್ರಹ್ಮಾವರ ಸೈಂಟ್ ಮೇರಿಸ್ ಕ್ಯಾಥೆಡ್ರಲ್ ಇದರ ವಿಕಾರ್ ಜನರಲ್ ವಂ ಸಿ ಎ ಐಸಾಕ್ ಹಾಗೂ ಇತರರು ಪ್ರಮುಖರು ಸ್ವೀಕರಿಸಿದರು.

ಹೊರೆ ಕಾಣಿಕೆ ಬಳಿಕ ನವೀಕೃತ ಕೆಥೆಡ್ರಲ್ ಇದರ ಶುದ್ದೀಕರಣ ಮತ್ತು ಆಶೀರ್ವಚನದ ಪ್ರಥಮ ಭಾಗದ ಪ್ರಾರ್ಥನಾ ವಿಧಿಗಳು ಆರಂಭವಾದವು. ಭಾರತೀಯ (ಮಲಂಕಾರ) ಓರ್ಥೊಡೊಕ್ಸ್ ಸಿರಿಯನ್ ಸಭೆಯ ಸರ್ವೋಚ್ಚ ಮುಖ್ಯಸ್ಥರು, ಕಥೋಲಿಕೊಸ್ ಪರಮ ಪವಿತ್ರ ಬಸೆಲಿಯೋಸ್ ಮಾರ್ತೋಮಾ ದ್ವಿತಿಯರ ನೇತ್ರೃತ್ವದಲ್ಲಿ ಪುನರ್ ಪ್ರತಿಷ್ಠಾಪನೆಯ ದೈವಿಕ ವಿಧಿವಿಧಾನಗಳು ನೂತನ ಚರ್ಚಿನ ಮಹಾದ್ವಾರವನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿ ಬಳಿಕ ದೀಪ ಹಚ್ಚುವುದರ ಮೂಲಕ ಚಾಲನೆ ನೀಡಿದರು. ಬಳಿಕ ಪುನರ್ ಪ್ರತಿಷ್ಠಾಪನೆಯ ದೈವೀಕ ವಿಧಿವಿಧಾನಗಳು ಜರುಗಿದವು.

ಬ್ರಹ್ಮಾವರ ಸೀರಿಯನ್ ಓರ್ಥೊಡಕ್ಸ್ ಧರ್ಮಪ್ರಾಂತ್ಯದ ಮೆಟ್ರೋಪಾಲಿಟನ್ ವಂ. ಯಾಕೂಬ್ ಮಾರ್ ಇಲಿಯಾಸ್, ಕೊಲ್ಕತ್ತಾ ಧರ್ಮಪ್ರಾಂತ್ಯದ ಬಿಷಪ್ ಜೋಸೆಫ್ ಮಾರ್ ದಿಯಾನಿಯೊಸ್, ಮುಂಬೈ ಧರ್ಮಪ್ರಾಂತ್ಯದ ಗೀರ್ ವರ್ಗೀಸ್ ಮಾರ್ ಕಾರ್ಲಿಯೋಸ್, ಅಹಮದಬಾದ್ ಧರ್ಮಪ್ರಾಂತ್ಯದ ಗೀರ್ ವರ್ಗೀಸ್ ಮಾರ್ ಯೂಲಿಸ್, ಬೆಂಗಳೂರು ಧರ್ಮಪ್ರಾಂತ್ಯದ ಅಬ್ರಾಹಾಂ ಮಾರ್ ಸೆರಾಫೀಮ್ ಅವರು ಪುನರ್ ಪ್ರತಿಷ್ಠಾಪನೆಯ ವಿಧಿವಿಧಾನಗಳಲಿ ಪಾಲ್ಗೊಂಡರು.

ಕಾಥೆಡ್ರಲ್ ವಿಕಾರ್ ಜನರಲ್ ವಂ ಸಿ ಎ ಐಸಾಕ್, ಸಹಾಯಕ ಧರ್ಮಗುರುಗಳಾದ ವಂ.ಲೋರೆನ್ಸ್ ಡಿಸೋಜಾ, ವಂ ಡೇವಿಡ್ ಕ್ರಾಸ್ತಾ, ವಂ. ಅಬ್ರಾಹಾಂ ಕುರಿಯಾಕೋಸ್, ವಂ ನೋಯೆಲ್ ಲೂವಿಸ್, ವಂ ಜೋಸೆಫ್ ಚಾಕೊ, ಕ್ಯಾಥೆಡ್ರಲಿನ ಟ್ರಸ್ಟಿ ಅನಿಲ್ ರೊಡ್ರಿಗಸ್, ಕಟ್ಟಡ ನವೀಕರಣ ಸಮಿತಿಯ ಅಲನ್ ರೋಹನ್ ವಾಝ್ ಹಾಗೂ ಇತರರು ಉಪಸ್ಥಿತರಿದ್ದರು.

ಕ್ಯಾಥೆಡ್ರಲಿನ ಪುನರ್ ಪ್ರತಿಷ್ಠಾಪನೆಯ ದೈವೀಕ ವಿಧಿವಿಧಾನಾದ ಎರಡನೇ ಹಂತದ ವಿಧಿಗಳು ಶುಕ್ರವಾರ ಬೆಳಿಗ್ಗೆ 6.30 ಕ್ಕೆ ಆರಂಭಗೊಂಡು ಪವಿತ್ರ ಬಲಿಪೂಜೆ ಜರುಗಲಿದೆ. ಬಳಿಕ ಸಾರ್ವಜನಿಕ ಸಭಾಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯದ ಗೃಹ ಸಚಿವ ರಾಮಲಿಂಗರೆಡ್ಡಿ, ನಗರಾಭಿವೃದ್ಧಿ ಸಚಿವರಾದ ಕೆ ಜೆ ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಇತರ ಗಣ್ಯರ ನೇತೃತ್ವದಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ

Related posts

Leave a Reply