Header Ads
Header Ads
Breaking News

ನವೀಕೃತ ಮರ್ಸಿ ಅಮ್ಮನವರ ದೇವಾಲಯ ಪೂರ್ವಭಾವಿಯಾಗಿ ಆಕರ್ಷಕ ಹೊರೆ ಕಾಣಿಕೆ

ಮಂಜೇಶ್ವರ: ಸುಮಾರು ಮೂರುವರೆ ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ನಾಲ್ಕು ನೂರು ವರ್ಷಗಳ ಪುರಾತನವಾದ ಮಂಜೇಶ್ವರ ಹೊಸ ಬೆಟ್ಟಿನಲ್ಲಿರುವ ಮರ್ಸಿ ಅಮ್ಮನವರ ದೇವಾಲಯನ ಉದ್ಘಾಟನೆಯ ಪ್ರಯುಕ್ತ ಆಕರ್ಷಕ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು.ತೂಮಿನಾಡು ಹಾಗೂ ಹೊಸಂಗಡಿ ಜಂಕ್ಷನ್ ನಿಂದ ಚಾಲನೆ ದೊರೆತ ಹೊರೆ ಕಾಣಿಕೆ ನೂರಾರು ವಾಹನಗಳೊಂದಿಗೆ ಮಂಜೇಶ್ವರ ರೈಲ್ವೇ ಸ್ಟೇಶನ್ ರಸ್ತೆ ಜಂಕ್ಷನ್ ಬಳಿ ಸಮ್ಮಿಲನಗೊಂಡು ಬಳಿಕ ಚರ್ಚ್ ಕಡೆ ಸಾಗಿತು.

ಬಳಿಕ ಚರ್ಚ್ ನ ಧ್ವಾರವನ್ನು ಕೊಡುಗೆಯಾಗಿ ನೀಡಿದ ದಂಪತಿಗಳಾದ ಲೂಯಿಸ್ ಡಿ ಸೋಜ, ಅಲಿನ್ ಡಿಸೋಜ ಹಾಗೂ ಫಿಲೋಮಿನಾ ಮೊಂತೆರೋ ರವರು ತಮ್ಮ ದಿವ್ಯ ಹಸ್ತದಿಂದ ಧ್ವಾರವನ್ನು ಲೋಕಾರ್ಪಣೆ ಗೈದರು. ಈ ಸಂದರ್ಭ ವಂದನೀಯ ಗುರು ವಾಲ್ಟರ್ ಒಸ್ವಾಲ್ಡ್ ಡಿ ಮೆಲ್ಲೊ ಆಶೀರ್ವಚನ ನೀಡಿ ಶುಭ ಹಾರೈಸಿದರು.ಬಳಿಕ ಬಾಲ ಯೇಸು ಮಂಟಪವನ್ನು ಉದ್ಘಾಟಿಸಿ ವಂದನೀಯ ಗುರು ವಾಲ್ಟರ್ ಒಸ್ವಾಲ್ಡ್ ಡಿ ಮೆಲ್ಲೊ ಆಶೀರ್ವಚನ ನೀಡಿದರು.ಬಳಿಕ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು. ವಿವಿಧ ಚರ್ಚ್, ಸಂಘಟನೆಗಳಿಂದ ನೂರರು ವಾಹನಗಳಲ್ಲಿ ಹೊರೆ ಕಾಣಿಕೆ ಬಂದಿತ್ತು. ಹೊರೆ ಕಾಣಿಕೆಯಲ್ಲಿ ಚರ್ಚ್ ತಂಡದವರು ವಿವಿಧ ರೀತಿಯ ಉಡುಗೆ ಧರಿಸಿ ಆಗಮಿಸುತ್ತಿರುವುದು ಎಲ್ಲರ ಗಮನ ಸೆಳೆಯಿತು. ನಾಸಿಕ್ ಬ್ಯಾಂಡ್, ವಿವಿಧ ರೀತಿಯ ಟ್ಯಾಬ್ಲೋಗಳು, ಬ್ರಾಸ್ ಬ್ಯಾಂಡ್ ಮೊದಲಾದವುಗಳು ಹೊರೆ ಕಾಣಿಕೆಯಲ್ಲಿ ಆಕರ್ಷಣೀಯವಾಗಿತ್ತು.ಬಳಿಕ ವೇದಿಕೆಯಲ್ಲಿ ಧಾರ್ಮಿಕ ಸೌಹಾರ್ಧ ಕೂಟ ನಡೆಯಿತು.

ಚರ್ಚ್ ಧರ್ಮಗುರುಗಳಾದ ವಲೇರಿಯನ್ ಲೂಯಿಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸಯ್ಯದ್ ಅತ್ತಾವುಲ್ಲ ತಂಘಲ್, ತುಳುವ ಬೊಳ್ಳಿ ದಯಾನಂದ ಜಿ. ವಂದನೀಯ ಗುರು ವಾಲ್ಟರ್ ಒಸ್ವಾಲ್ಡ್ ಡಿ ಮೆಲ್ಲೋ ಉಪಸ್ಥರಿದ್ದರು.ಮೊದಲನೇಯದಾಗಿ ಮಾತನಾಡಿದ ಅತ್ತಾವುಲ್ಲ ತಂಘಲ್ ಧರ್ಮ ಎನ್ನವುದು ಅವರವರ್ ಮನಸ್ಸಿನಲ್ಲಿರುವ ನಂಬಿಕೆ. ಧರ್ಮದ ತಳಹದಿಯಲ್ಲಿ ಎಲ್ಲಾ ಧರ್ಮಗಳು ಶಾಂತಿ, ಸಹಿಷ್ಣುತೆ, ಸಹಬಾಳ್ವೆ, ಸತ್ಯವನ್ನು ಹೇಳುವಂತೆ ಭೋಧಿಸುತ್ತದೆ. ಎಲ್ಲಿಯೂ ಯಾವುದೇ ಧರ್ಮ ಅಶಾಂತಿಯನ್ನು ಸೃಷ್ಟಿಸಲು ಹೇಳುತ್ತಿಲ್ಲ. ಇದನ್ನು ನಾವು ಅರ್ಥೈಸಬೇಕಾಗುತ್ತದೆ. ಕ್ರಿಶ್ಚಿಯನರು ಎಂದರೆ ತುಂಬಾ ಶಾಂತಿ ಪ್ರಿಯರು ಎಂದು ಹೇಳಿ ನೂತನವಾಗಿ ನಿರ್ಮಾಣಗೊಂಡ ಚರ್ಚ್ ಗೆ ಶುಭವನ್ನು ಹಾರೈಸಿದರು.ಬಳಿಕ ಮಾತನಾಡಿದ  ತುಳುವ ಬೊಳ್ಳಿ ದಯಾನಂದ ರವರು ಎಲ್ಲಾ ಭಾಷೆಗಳಲ್ಲೂ ಅಮ್ಮ ಎನ್ನುವ ಭಾಷೆಗೆ ವಿಶೇಷವಾದ ಪ್ರಾಧಾನ್ಯತೆ ಇದೆ. ಆದರೆ ಎಲ್ಲಾ ಅಮ್ಮ ಎನ್ನುವ ಪದಕ್ಕೆ ಒಂದೇ ಅರ್ಥ ಇರುವುದು ಕೂಡಾ ವಿಶೇಷತೆಯಾಗಿದೆ. ಅದೇ ರೀತಿ ಇವತ್ತು ಕೂಡಾ ಇಲ್ಲಿ ಈ ಚರ್ಚ್ ಮರ್ಸಿ ಅಮ್ಮ ಎಂಬ ಹೆಸರಿನಲ್ಲಿ ನಿರ್ಮಾಣಗೊಂಡಿದೆ.

ಜಾತಿಗಳು ಹಲವು ಇದ್ದರೂ ದೇವರು ಒಂದೇ. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾತಿ ಮತ ಬೆರೆತು ಭಾರತ ದೇಶವನ್ನು ಕಟ್ಟೋಣ ವೆಂದು ಹೇಳಿ ನೂತನವಾಗಿ ಉದ್ಘಾಟನೆಗೆ ಸಜ್ಜಾಗಿರುವ ಚರ್ಚ್ ಗೆ ಶುಭವನ್ನು ಹಾರೈಸಿದರು.ಬಳಿಕ ಮಾತನಾಡಿದ ವಂದನೀಯ ಗುರು ವಾಲ್ಟರ್ ಒಸ್ವಾಲ್ಡ್ ಡಿ ಮೆಲ್ಲೋ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡಿ ಧ್ವೇಷವನ್ನು ಹರಡಿ ಜಾತಿಯ ಹೆಸರಿನಲ್ಲಿ ಪರಸ್ಪರ ಕಚ್ಚಾಡಲೂ ಯಾವುದೇ ದೇವನೂ ಹೇಳಿಲ್ಲ. ನಮ್ಮಲ್ಲಿರುವ ಒಳ್ಳೆಯತನವನ್ನು ಇತರರಿಗೆ ನೋವಾಗದಂತೆ ಹಂಚಿಕೊಂಡು ನಡೆದರೆ ನಾವು ಖಂಡಿತವಾಗಿಯೂ ದೇವರ ಮಕ್ಕಳಾಗುತ್ತೇವೆ. ಶಾಂತ್ಯನ್ನು ಕಾಪಾಡೋಣ ಉತ್ತಮ ಪ್ರಜೆಗಳಾಗೋಣ ಎಲ್ಲರಿಗೂ ಶುಭವಾಗಲಿ ಎಂದು ಹೇಳಿದರು.ಈ ಸಂದರ್ಭ ವಿವಿಧ ಚರ್ಚ್ ನ ಧರ್ಮಗುರುಗಳು, ಹಿಂದೂ, ಮುಸ್ಲಿಂ, ಕ್ರೈಸ್ತ ಬಾಂಧವರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಂಜೇಶ್ವರದ ಹೊಸ ಬೆಟ್ಟುನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಚರ್ಚ್ ನೂತ ಶೈಲಿಯದ್ದಾಗಿದ್ದು, ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ. 

Related posts

Leave a Reply