Header Ads
Header Ads
Breaking News

ನವೆಂಬರ್ 12ರಂದು ಮನಪಾ ಚುನಾವಣೆ ಹಿನ್ನೆಲೆ : 6ವಾರ್ಡ್‍ಗಳಲ್ಲಿ ಸ್ಪರ್ಧಿಸಲಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆರು ವಾರ್ಡ್‍ಗಳಲ್ಲಿ ಸ್ಪರ್ಧಿಸಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ಸುಲೇಮಾನ್ ಕಲ್ಲರ್ಪೆ ಹೇಳಿದ್ರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಜನಪರ ಕಾಳಜಿಯನ್ನು ಹೊಂದಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಗಳು ಆಯ್ಕೆಗೊಂಡರೆ, ಮೂಲಭೂತ ಸಮಸ್ಯೆಗಳಾದ ನೀರು, ರಸ್ತೆ, ವಿದ್ಯುತ್, ಡ್ರೈನೇಜ್, ಶುಚಿತ್ವ ಮುಂತಾದ ವಿಷಯಗಳ ಪರಿಹಾರಕ್ಕೆ ಹೆಚ್ಚಿನ ಗಮನ ಹರಿಸುತ್ತೇವೆ ಎಮದು ಹೇಳಿದ್ರು. ಸುದ್ದಿಗೋಷ್ಟಿಯಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾದ ಶ್ರೀಕಾಂತ್ ಸಾಲ್ಯಾನ್, ವಲಯಾಧ್ಯಕ್ಷರಾದ ಎಸ್ ಎಂ ಮುತ್ತಲಿಬ್, ವಲಯ ಉಪಾಧ್ಯಕ್ಷರಾದ ಮಹಮ್ಮದ್ ಆಲಿ, ವಲಯ ಕಾರ್ಯದರ್ಶಿ ಅಡ್ವಕೇಟ್ ಸರ್ಫರಾಝ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *