Header Ads
Header Ads
Breaking News

ನವೆಂಬರ್ 12ರಂದು 15ನೇ ವರ್ಷದ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಪಿಂಗಾರ ಕನ್ನಡ ಸುದ್ದಿಪತ್ರಿಕೆ ವತಿಯಿಂದ ನೀಡಲಾಗುವ 15ನೇ ವರ್ಷದ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನವೆಂಬರ್ 12ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಪಿಂಗಾರ ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕರಾದ ರೋಯ್ ಕ್ಯಾಸ್ಟಲಿನೊ ಅವರು ಹೇಳಿದ್ದಾರೆ.

ಮಂಗಳೂರಿನ ಹೊಟೇಲ್ ವುಡ್‍ಲ್ಯಾಂಡ್ಸ್‍ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಪರಿಸರ ಸ್ನೇಹಿಯಾದ ಸೊಳ್ಳೆ ನಿವಾರಕ ಯಂತ್ರವನ್ನು ಆವಿಷ್ಕಾರ ಮಾಡಿದ ಅಂತರಾಷ್ಟ್ರೀಯ ಮಾನ್ಯತೆ ಪಡೆದ ವಿಜ್ಞಾನಿ ಮಂಗಳೂರಿನ ಇಗ್ನೇಷಿಯಸ್ ಒರ್ವಿನ್ ನೊರೊನ್ಹಾ ಅವರಿಗೆ ಪ್ರದಾನ ಮಾಡಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ವಾರ್ಷಿಕೋತ್ಸವದ ಪ್ರಯುಕ್ತ ಚುಟುಕು ಕವಿಗೋಷ್ಠಿ ಮತ್ತು ಗೋಕುಲ ನಿರ್ಗಮನ ನೃತ್ಯ ನಾಟಕ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಐವನ್ ಡಿಸೋಜಾ, ಮಾಜಿ ಶಾಸಕರಾದ ಜೆ ಆರ್ ಲೋಬೋ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಅಂತ ಹೇಳಿದ್ರು.

ಬಳಿಕ ಪಿಂಗಾರ ಪ್ರಶಸ್ತಿ ಆಯ್ಕೆ ಸಮಿತಿಯ ಜಂಟಿ ಸಂಚಾಲಕರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಈ ಪ್ರಶಸ್ತಿಗಾಗಿ ಇಗ್ನೇಷಿಯಸ್ ಒರ್ವಿನ್ ನೊರ್ಹೊನಾ ಇವರ ಹೆಸರನ್ನು ಬೆಂಗಳೂರಿನ ಮಲೇರಿಯಾ ಸಂಶೋಧನಾ ಸಮಸ್ಥೆಯ ಮಾಜಿ ವಿಜ್ಞಾನಿಯೊಬ್ಬರು ಸೂಚಿಸಿದ್ದಾರೆ ಅಂತ ಹೇಳಿದ್ರು.

ಸುದ್ದಿಗೋಷ್ಟಿಯಲ್ಲಿ ಪಿಂಗಾರ ಕನ್ನಡ ಸುದ್ದಿ ಪತ್ರಿಕೆಯ ಸಂಪಾದಕರಾದ ರೈಮಂಡ್ ಡಿಕುನ್ಹಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಮಂಗಳೂರಿನ ಫೋರ್ ವಿಂಡ್ಸ್ ಸಂಸ್ಥೆಯ ನಿರ್ದೇಶಕರಾದ ಇಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *