Header Ads
Header Ads
Breaking News

ನಾಗಪುರದ ಪ್ರಚಾರಕರ ಮಾತು ಕೇಳಿ ಬ್ಯಾಂಕ್‌ಗಳ ವಿಲೀನ : ಐವನ್ ಡಿಸೋಜಾ ಹೇಳಿಕೆ

ಖಾಸಗಿ ಬ್ಯಾಂಕ್‌ಗಳ ವಿಲೀನ ಕ್ರಮ ಖಂಡನೀಯ. ಕೇಂದ್ರ ಸರಕಾರ ನಾಗಪುರದ ಪ್ರಚಾರಕರ ಮಾತು ಕೇಳಿ ಇಂತಹ ಆತುರದ ನಿರ್ಧಾರ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರ್ಥಶಾಸ್ತ್ರಜ್ಞರ ಬದಲಿಗೆ ಪ್ರಚಾರಕರ ಮಾತು ಕೇಳಿ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದೆ. ಯಾಕಂದ್ರೆ ದೇಶದ ಪ್ರಧಾನಿಗೆ ಟೈಮ್ ಇಲ್ಲಂತೆ. ಸದ್ಯ ಕೇಂದ್ರದ ಆಡಳಿತ ಮಲಗಿದೆ ಎಂದು ಕಿಡಿಕಾರಿದ ಅವ್ರು ದೇಶದ ಆರ್ಥಿಕ ಸ್ಥಿತಿ ಐಸಿಯುನಲ್ಲಿದೆ. ಭಾರತದ ಜಿಡಿಪಿ ಬಾಂಗ್ಲಾ, ಪಾಕ್‌ಗಿಂತಲೂ ಕೆಳಮಟ್ಟಕ್ಕೆ ಇಳಿದಿದೆ. ಸ್ವಿಸ್ ಬ್ಯಾಂಕ್‌ನ ಹಣ ತರಬೇಕಾದವರು ಆರ್‌ಬಿಐನ ಹಣ ತೆಗೆದಿದ್ದಾರೆ. ಬ್ಯಾಂಕ್‌ಗಳ ವಿಲೀನ ಮೂಲಕ ಬಡವರ ದಾರಿ ಬಂದ್ ಮಾಡಲಾಗಿದೆ. ಈ ಮೂಲಕ ಕಾರ್ಪೋರೆಟ್ ಕುಳಗಳಿಗೆ ಮಣೆ ಹಾಕಲು ಹುನ್ನಾರ ಮಾಡಲಾಗಿದೆ ಎಂದು ಆರೋಪಿಸಿದರು.

Related posts

Leave a Reply

Your email address will not be published. Required fields are marked *