Breaking News

ನಾಗರಿಕ ಸೇವೆಗಳು ಕನ್ನಡಿಗರಿಗೆ ಗಗನ ಕುಸುಮವಲ್ಲ ಆಗಸ್ಟ್ ೧೨ರಂದು ನಡೆಯಲಿರುವ ಕಾರ್ಯಕ್ರಮ

ನಾಗರಿಕ ಸೇವೆಗಳು ಕನ್ನಡಿಗರಿಗೆ ಗಗನ ಕುಸುಮವಲ್ಲ ಎಂಬ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗಾಗಿ/ನಾಗರಿಕ ಸೇವಾ ಆಕಾಂಕ್ಷಿಗಳಿಗಾಗಿ ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮ ಆಗಸ್ಟ್ ೧೨ರಂದು ನಡೆಯಲಿದೆ ಎಂದು ಜೆ.ಡಿ.ನಾಯ್ಕ ಅಭಿಮಾನಿ ಬಳಗದ ಅಧ್ಯಕ್ಷ ನಾಗೇಶ ದೇವಾಡಿಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆ.ಡಿ.ನಾಯ್ಕ ಅಭಿಮಾನಿ ಬಳಗದ ಅಧ್ಯಕ್ಷ ನಾಗೇಶ ದೇವಾಡಿಗ ಈ ವಿನೂತನ ಕಾರ್ಯಕ್ರಮವನ್ನು ಭಟ್ಕಳ ಜೆ.ಡಿ.ನಾಯ್ಕ ಅಭಿಮಾನಿ ಬಳಗವು ಆಯೋಜಿಸಿದ್ದು, ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ ಘಟಕ, ಭಾರತ ವಿಕಾಸ ಪರಿಷತ್ತು, ರಾಣಿ ಚೆನ್ನಭೈರಾದೇವಿ ಶಾಖೆ ಭಟ್ಕಳ ಇವರ ಜಂಟಿ ಸಹಯೋಗದಲ್ಲಿ ನಡೆಸಲಿದ್ದೇವೆ. ಈ ಕಾರ್ಯಕ್ರಮವೂ ತಾಲೂಕಿನ ಶ್ರೀ ಗುರು ಸುಧೀಂದ್ರ ಕಾಲೇಜು ಸಭಾಂಗಣದಲ್ಲಿ ನಡೆಯಲಿದ್ದು, ಶ್ರೀ ಗುರು ಸುಧೀಂದ್ರ ಕಾಲೇಜು ಹಾಗೂ ಅಂಜುಮಾನ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ೫ IಂS, IಈS ಹಾಗೂ IPS ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದರ ಜೊತೆಗೆ ಸಂವಾದ ನಡೆಸಲಿದ್ದಾರೆ. ಎಂದರು.
ಸುದ್ದಿಗೋಷ್ಠಿಯಲ್ಲಿ ಜೆ.ಡಿ.ನಾಯ್ಕ ಅಭಿಮಾನಿ ಬಳಗದ ಪದಾಧಿಕಾರಿ ಸಚಿನ್ ನಾಯ್ಕ, ಸುರೇಶ ನಾಯ್ಕ, ಕುಮಾರ ನಾಯ್ಕ, ವೆಂಕ್ಟಯ್ಯ ಭೈರುಮನೆ, ಸುಬ್ರಾಯ ನಾಯ್ಕ, ಮಾದೇವ ನಾಯ್ಕ, ಗಜಾನನ ದೇವಾಡಿಗ ಸೇರಿದಂತೆ ಬಳಗದ ಸದಸ್ಯರು ಉಪಸ್ಥಿತರಿದ್ದರು.
ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply