Header Ads
Breaking News

ನಾಗರ ಪಂಚಮಿಯಂದು ಜೀವಂತ ನಾಗನಿಗೆ ಪೂಜೆ ಪುನಸ್ಕಾರ

ನಾಗರ ಪಂಚಮಿಯ ದಿನ ಎಲ್ಲೆಡೆ ನಾಗನ ಕಲ್ಲಿಗೆ ಹಾಲೆರೆದು ಪೂಜಿ ಸಲ್ಲಿಸಿದರೆ ಕಾಪುವಿನ ಒಂದೆಡೆ ಮಾತ್ರ ಜೀವಂತ ಹಾವಿಗೆ ಪೂಜೆ ಸಲ್ಲಿಸುವ ಮೂಲಕ ನಾಗರಪಂಚಮಿಯನ್ನು ಬಹಳ ವೈಶಿಷ್ಟ್ಯವಾಗಿ ಆಚರಿಸಲಾಗಿದೆ. ಕಾಪುವಿನ ಮಲ್ಲಾರು ನಿವಾಸಿ ಗೋವರ್ಧನ್ ಭಟ್‌ರವರೇ ಈ ಜೀವಂತ ನಾಗನನ್ನು ಪೂಜಿಸುವ ವ್ಯಕ್ತಿ, ಪ್ರತೀ ವರ್ಷವೂ ಇವರು ಜೀವಂತ ನಾಗನಿಗೆ ಪೂಜೆ ಸಲ್ಲಿಸುತ್ತಾರೆ. ಗೋವರ್ಧನ್ ಭಟ್ ಎಲೆಕ್ಟ್ರಿಕಲ್ ಉದ್ಯೋಗಿಯಾಗಿದ್ದು ಕಾಪುಪರಿಸರದಲ್ಲಿ ಚಿರಪರಿಚಿತರು.

ಈ ಪರಿಸರದಲ್ಲಿ ಎಲ್ಲೆ ಹಾವುಗಳೂ ಸಂಕಷ್ಟದಲ್ಲಿದ್ದರೂ ತಕ್ಷಣ ನೆರೆವಿಗೆ ಧಾವಿಸುತ್ತಾರೆ. ಗಾಯಗೊಂಡ ಹಾವುಗಳನ್ನು ಆರೈಕೆ ಮಾಡಿ ಗುಣಮುಖಗೊಂಡ ನಂತರ ಕಾಡಿಗೆ ಬಿಡುವ ಮೂಲಕ ಸಾಕಷ್ಟು ಬಾರಿ ಉರಗ ಪ್ರೇಮ ಮೆರೆದಿದ್ದಾರೆ. ಪ್ರತಿ ವರ್ಷ ನಾವು ನಾಗರ ಹಾವನ್ನು ಪುಜಿಸುವುದು ಸಾಮಾನ್ಯ ವಾಡಿಕೆ ಇದು ನಮಗೆ ಖುಷಿ ನೀಡುತ್ತೆ ಮುಂದೆಯೂ ಇದನ್ನುಮುಂದುವರಿಸಿಕೊಂಡು ಹೋಗುವ ಇರಾದೆ ವ್ಯಕ್ತ ಪಡಿಸುತ್ತಾರೆ ಉರಗ ಪ್ರೇಮಿ ಗೋವರ್ಧನ್ ಭಟ್.

Related posts

Leave a Reply

Your email address will not be published. Required fields are marked *