Header Ads
Header Ads
Breaking News

ನಾಗುರಿಯ ಆಂಜೆಲೂರ್ ಚರ್ಚ್ ಹಾಲ್‌ನಲ್ಲಿ ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರ

ಶ್ರೀ ಸಾಯಿ ಸುಶಿರತ್ನ ಚಾರಿಟೇಬಲ್ ಟ್ರಸ್ಟ್ ಇವರ ನೇತೃತ್ವದಲ್ಲಿ ಉಚಿತ ಆರೋಗ್ಯ, ನೇತ್ರ ತಪಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಹಾಗೂ ರಕ್ತದಾನ ಶಿಬಿರ ನಾಗುರಿಯ ಆಂಜೆಲೂರ್ ಚರ್ಚ್ ಹಾಲ್‌ನಲ್ಲಿ ನಡೆಯಿತು.

ಮಂಗಳೂರಿನ ನಾಗುರಿಯ ಆಂಜೆಲೂರ್ ಚರ್ಚ್ ಹಾಲ್‌ನಲ್ಲಿ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಆಂಜೆಲೂರ್ ಚರ್ಚ್‌ನ ಧರ್ಮಗುರುಗಳಾದ ವಿಲಿಯಮ್ ಮಿನೇಜಸ್ ಅವರು ಮಾತನಾಡಿ ಶ್ರೀ ಸಾಯಿ ಸುಶಿರತ್ನ ಚಾರಿಟೇಬಲ್ ಟ್ರಸ್ಟ್‌ನಿಂದ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹೆಮ್ಮೆಯ ವಿಚಾರ. ಆಂಜೆಲೂರ್ ಚರ್ಚ್ ಹಾಲ್‌ನಲ್ಲಿ ಶಿಬಿರ ಆಯೋಜಿಸಿದ್ದು, ಮುಂದಿನ ದಿನದಲ್ಲೂ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವನ್ನು ಮಾಡಿಕೊಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ಸುಮಾರು 400ಕ್ಕೂ ಹೆಚ್ಚು ಜನರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದು, ಶಿಬಿರದ ಪ್ರಯೋಜವನ್ನು ಪಡೆದುಕೊಂಡರು. ಮಾತ್ರವಲ್ಲದೆ ಸುಮಾರು 250ಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮರೋಲಿ ವಾರ್ಡ್‌ನ ಕಾರ್ಪೊರೇಟರ್ ಕೇಶವ ಸುವರ್ಣ ಫಾದರ್ ಮುಲ್ಲರ್‍ಸ್ ಆಸ್ಪತ್ರೆಯ ಮಾರ್ಕೆಟಿಂಗ್ ಮುಖ್ಯಸ್ಥ ಮನು ಮ್ಯಾಥ್ಯು, ಮುಖ್ಯ ಅತಿಥಿಗಳಾಗಿ ರೊನಾಲ್ಡ್ ಕುಲಾಸೋ, ಡಾ. ಪ್ರವೀಣ್, ಶ್ರೀ ಸಾಯಿ ಸುಶಿರತ್ನ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕರಾದ ಸತೀಶ್ ಕುಮಾರ್ ಮರೋಲಿ, ಶ್ರೀ ಸಾಯಿ ಸುಶಿರತ್ನ ಚಾರಿಟೇಬಲ್ ಟ್ರಸ್ಟ್‌ನ ಸಂಘಟಿತ ಅಧ್ಯಕ್ಷ ಆಸ್ವಾಲ್ಡ್ ಸಿಕಿಯೇರಾ, ಶ್ರೀ ಸಾಯಿ ಸುಶಿರತ್ನ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯ ವಿಜೆ ವಿನೀತ್ ಕುಮಾರ್, ಸುಶೀಲಾ ಮರೋಲಿ ಮತ್ತು ರತ್ನ ಮರೋಲಿ, ದಾನಿಗಳಾದ ಸತೀಶ್ ಎಮ್ ಶೆಟ್ಟಿ, ಕಿನ್ನಿಗೋಳಿ, ಡಿನ್ನು ಪುತ್ರನ್ ಮತ್ತು ಸುಧೀರ್ ತಲಪಾಡಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply