Header Ads
Header Ads
Breaking News

ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ : ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಬಲೀಂದ್ರ ಪೂಜೆ

ನಾಡಿನಾದ್ಯಂತ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪೇಜಾವರ ಅಧೋಕ್ಷಜ ಮಠಾಧೀಶ ವಿಶ್ವೇಶತೀರ್ಥ ಶೀ ಗಳು ಬೆಂಗಳೂರಿನಲ್ಲಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ನೆನ್ನೆ ಎಣ್ಣೆಶಾಸ್ತ್ರ ಮುಗಿಸಿದ್ದ ಸ್ವಾಮೀಜಿ, ಇಂದು ಗೋಪೂಜೆಯನ್ನು ನೆರವೇರಿಸಿದ್ದಾರೆ. ಕರಾವಳಿ ಭಾಗದಲ್ಲಿ ದೀಪಾವಳಿ ಸಂದರ್ಭ ನಡೆಯುವ ಗೋವು ಪೂಜೆಗೆ ವಿಶೇಷ ಮಹತ್ವವಿದೆ. ಹೀಗಾಗಿ ರಾಜಧಾನಿಯ ವಿದ್ಯಾಪೀಠದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದ ಹಿರಿಯ ಯತಿಗಳು ಹತ್ತಾರು ಹಸುಗಳಿಗೆ ಆಹಾರ, ಹಣ್ಣು ಹಂಪಲುಗಳನ್ನು ನೀಡಿದ್ದಾರೆ.ಇತ್ತ ಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ಬಲೀಂದ್ರ ಪೂಜೆಯೂ ಸಂಪನ್ನಗೊಂಡಿತು. ರಜೆಯ ಕಾರಣ ಮತ್ತು ನಿರಂತರವಾಗಿ ಸುರಿದ ಮಳೆ ಬಿಡುವು ನೀಡಿದ ಕಾರಣದಿಂದ ಶ್ರೀಕೃಷ್ಣ ಮಠಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.

Related posts

Leave a Reply

Your email address will not be published. Required fields are marked *