Header Ads
Header Ads
Breaking News

ನಾಡ ದೋಣಿ ತಪಾಸಣೆಗೆ ಬಂದ ಸಹಾಯಕ ಉಪನಿರ್ದೇಶಕ ಮೀನುಗಾರರೊಡನೆ ಅಸಭ್ಯ ವರ್ತನೆ ಮೀನುಗಾರಿಕಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಭಟ್ಕಳದ ನೂರಾರು ಮೀನುಗಾರರಿಂದ ಆಕ್ರೋಶ

ಭಟ್ಕಳ ನಾಡ ದೋಣಿ ಪರೀಶೀಲನೆಗೆಂದು ಬಂದು ಮೀನುಗಾರರೊಡನೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನೂರಾರು ಮೀನುಗಾರರು ಭಟ್ಕಳದ ಮೀನುಗಾರಿಕೆ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿದು ಪ್ರತಿಬಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.

ಕಾರವಾರ ಜಿಲ್ಲಾ ಮೀನುಗಾರಿಕಾ ಕಛೇರಿಯಿಂದ ಭಟ್ಕಳ ತಾಲೂಕು ನಾಡ ದೋಣಿ ತಪಾಸಣೆಗೆ ಬಂದ ಕಾರವಾರದ ಮೀನುಗಾರಿಕೆಯ ಸಹಾಯಕ ಉಪನಿರ್ದೇಶಕ ವೆಂಕಟ್ರಮಣ ಹೆಗಡೆ ಭಟ್ಕಳಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಮುಂಡಳ್ಳಿ ಮತ್ತು ಬೆಳಕೆಯಲ್ಲಿ ನೀರಿಗಿಳಿದ ನಾಡದೋಣಿಗಳನ್ನಷ್ಟೆ ಪರಿಶೀಲನೆ ನಡೆಸಿದ್ದರು. ಈ ಮಳೆಗಾಲದಲ್ಲೂ ದೋಣಿಗಳು ನೀರಲ್ಲಿ ಇರಬೇಕಾಗುತ್ತದೆ ನೀರಲ್ಲಿ ಇದ್ದಂತ ದೋಣಿಗಳನ್ನು ಮಾತ್ರ ನೋಂದಣೆ ಮಾಡಿಕೊಳ್ಳಲಾಗುತ್ತದೆ ಎಂದು ಬೇಜವಾಬ್ದಾರಿಯುತವಾಗಿ ಉತ್ತರ ನೀಡಿದ್ದರು. ಸುಸ್ಥಿತಿಯಲ್ಲಿ ದಡದಲ್ಲಿರುವ ದೋಣಿಯನ್ನು ಪರಿಶೀಲಸಬೇಕು. ದೋಣಿಯ ದಾಖಲೆ ಪತ್ರವನ್ನು ನಾವು ತೋರಿಸಲು ಸಿದ್ದರಿದ್ದೇವೆ ಎಂದು ಮೀನುಗಾರರು ಪಟ್ಟು ಹಿಡಿದರು ವೆಂಕಟ್ರಮಣ ಹೆಗಡೆ ಸ್ಪಂದಿಸಿಲ್ಲ. ಮೀನುಗಾರರೊಡನೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿ, ಸಮಯದ ಮೊದಲೆ ಅವರು ಅಲ್ಲಿಂದ ತೆರಳಿದ್ದಾರೆ. ಇದರಿಂದ ಆಕ್ರೋಶಗೊಂಡ ಮೀನುಗಾರರು ಮೀನುಗಾರಿಕೆ ಕಚೇರಿಗೆ ತೆರಳಿ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಬದಲ್ಲಿ ಪರಿಶಿಷ್ಟ ಜಾತಿ ಮೀನುಗಾರರ ಸಂಘ ಬೆಳಕೆಯ ಸ್ಥಾಪಕ ಅಧ್ಯಕ್ಷ ಬಾಸ್ಕರ ಮೊಗೇರ ಮಾಧ್ಯಮದವರೊಂದಿಗೆ ಮಾತನಾಡಿದ್ದು ಭಟ್ಕಳ ತಾಲೂಕ ನಾಡ ದೋಣಿಗಳ ತಪಾಸಣೆಗಾಗಿ ಎ.ಡಿ ಒನ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಆದರೆ ಈ ಅಧಿಕಾರಿಯು ಭಟ್ಕಳ ತಾಲೂಕಿಗೆ ತುಂಬ ಅನ್ಯಾಯ ಮಾಡಿದ್ದಾರೆ. ಯಾಕೆಂದರೆ ದೋಣಿಗಳ ಸರ್ವೆಯನ್ನು ನಡೆಸಲು ದೋಣಿಗಳು ನೀರಲ್ಲೆ ಇರಬೇಕು ಇಲ್ಲದಿದ್ದಲ್ಲಿ ಸರ್ವೇ ನಡೆಸಲಾಗುದಿಲ್ಲಾ ಎಂದಿದ್ದು, ಸಮಂಜಸವಲ್ಲ. ಅಲ್ಲದೇ ಭಟ್ಕಳದ ಜನರು ಸುಸಂಸ್ಕೃತರಲ್ಲ, ಇಲ್ಲಿಯ ಜನಗಳು ಸರಿಯಿಲ್ಲಾ ಎಂದು ಭಟ್ಕಳದ ಜನತೆಗೆ ಅವಮಾನ ಮಾಡಿದ್ದಾರೆ. ಆದ್ದರಿಂದ ನಮಗೆ ಈ ಅಧಿಕಾರಿಯನ್ನು ವರ್ಗಾವಣೆಗೊಳಿಸಿ ಹಾಗು ನಮಗೆ ನ್ಯಾಯ ಒದಗಿಸಿಕೊಡಬೇಕು. ನಾವು ತೋರಿಸುವ ದೋಣಿಗಳನ್ನು ನೊಂದಣಿ ಮಾಡಿಕೊಡಬೇಕು. ನಮ್ಮ ಎಲ್ಲಾ ದೋಣಿಗಳಿಗೆ ದಾಖಲೆಗಳಿವೆ. ಯಾವುದು ಕಾನೂನು ಬಾಹಿರವಾಗಿರುದಿಲ್ಲಾ. ಈ ಮಳೆಗಾಲದ ಸಂಧರ್ಭದಲ್ಲಿ ಸಮುದ್ರದಲ್ಲಿ ತೂಪಾನ್ ಭಯ ಇರುದರಿಂದ ದೋಣಿಗಳನ್ನು ಸಮುದ್ರಕ್ಕೆ ಇಳಿಸಲು ಭಯವಾಗುತ್ತದೆ. ಆದ್ದರಿಂದ ನಮ್ಮ ದೋಣಿಗಳನ್ನು ಇರುವಲ್ಲಿಯೇ ಪರಿಶಿಲಿಸಬೇಕು. ಮತ್ತು ನಮ್ಮನ್ನು ಅವಮಾನ ಗೊಳಿಸಿದ ಅಧಿಕಾರಿಯನ್ನು ವರ್ಗಾವಣೆಗೊಳಿಸಬೇಕು. ಹಾಗು ನಮ್ಮ ದೋಣಿಗಳನ್ನು ನೊಂದಾವಣೆ ಮಾಡಿಕೊಡಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಮಗೆ ನ್ಯಾಯ ಒದಗಿಸದಿದ್ದ ಪಕ್ಷದಲ್ಲಿ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸುತ್ತೇವೆ. ಎಂದು ಹೇಳಿದರು.

ಬೈಟ್: ಭಾಸ್ಕರ ಮೊಗೇರ.
ಇದೇ ಸಂದರ್ಬದಲ್ಲಿ ನಾಡದೋಣಿ ಮೀನುಗಾರರ ಸಂಘದ ಕಾರ್ಯದರ್ಶಿ ಸೋಮನಾಥ ಮೋಗೇರ ಮಾಧ್ಯಮದೊಂದಿಗೆ ಮಾತನಾಡಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಭಟ್ಕಳ ತಾಲೂಕ ನಾಡದೋಣಿ ಪರಿಶೀಲನೆಯ ಸಂಧರ್ಭದಲ್ಲಿ ಕಾರವಾರದ ಮೀನುಗಾರಿಕೆಯ ಸಹಾಯಕ ಉಪನಿರ್ದೇಶಕ ವೆಂಕಟ್ರಮಣ ಹೆಗಡೆ ಸರಿಯಾಗಿ ಪರಿಶೀಲನೆಯನ್ನು ನಡೆಸಿರುದಿಲ್ಲ. ಅಲ್ಲದೇ ಪರಿಶೀಲನಾ ಸಮಯದ ಮೊದಲೇ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ವಾಪಾಸ್ ಆಗಿರುತ್ತಾರೆ. ಮತ್ತು ನಾಡ ದೋಣಿಗಳನ್ನು ಪರಿಶೀಲಿಸುವ ಸಂದರ್ಬದಲ್ಲಿ ದೋಣಿಗಳು ಸುಸ್ಥಿತಿಯಲ್ಲಿ ಇರಬೇಕು ಎನ್ನುವ ನಿಯಮಗಳಿರುತ್ತದೆ. ನಮ್ಮ ಎಲ್ಲಾ ದೋಣಿಗಳು ಸುಸ್ಥಿತಿಯಲ್ಲಿ ಇರುತ್ತದೆ. ಇನ್ನು ಈಗ ಮಳೆಗಾಲದ ಸಮಯವಾಗಿರುವುದರಿಂದ ದೋಣಿಗಳು ಮೀನುಗಾರಿಕೆಗೆ ತೆರಳುವುದು ಸೆಪ್ಟೆಂಬರ್ ಒಂದನೇ ತಾರೀಕಿಗೆ ಆದ್ದರಿಂದ ಈಗ ಕೇವಲ ೧೦% ದೋಣಿಗಳು ನೀರಿಗಿಳಿದಿದೆ. ಇನ್ನು ೯೦% ದೋಣಿಗಳು ಇನ್ನು ನೀರಿಗಿಳಿದಿರುದಿಲ್ಲ. ಈ ಕಾರಣಕ್ಕೆ ಪುನಃ ಎಲ್ಲಾ ದೋಣಿಗಳನ್ನು ಪರಿಶೀಲನೆ ಮಾಡಿ ನಮಗೆ ನ್ಯಾಯ ಒದಗಿಸಿಕೊಡಬೇಕು. ಬೇಜವಾಬ್ದಾರಿ ತೋರಿದ ವೆಂಕಟರಮಣ ಹೆಗಡೆಯಂತ ಅಧಿಕಾರಿಗಳು ನಮ್ಮ ಜಿಲ್ಲೆಗೆ ಬೇಡವಾಗಿದ್ದಾರೆ. ಯಾಕೆಂದರೆ ಅವರು ನಮ್ಮ ಇಡಿ ತಾಲೂಕಿಗೆ ಅವಮಾನ ಮಾಡಿ ಹೋಗಿರುತ್ತಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೈಟ್ : ಸೋಮನಾಥ ಮೋಗೇರ.
ಸ್ಥಳಕ್ಕೆ ಕಾರವಾರದ ಮೀನುಗಾರಿಕೆ ಉಪನಿರ್ದೇಶಕ ಎಮ್.ಎಲ್. ದೊಡ್ಡಮನಿ ಬರಬೇಕು ಎಂದು ಪಟ್ಟುಹಿಡಿದಿದ್ದರು. ಸ್ಥಳಕ್ಕೆ ಮೀನುಗಾರಿಕೆ ಉಪನಿರ್ದೇಶಕ ಎಮ್. ಎಲ್. ದೊಡ್ಡಮನಿ ಭೇಟಿ ನೀಡಿ ಪರಿಶೀಲನೆ ನಡೆಸುವದಾಗಿ ಭರವಸೆ ನೀಡಿದರು. ಈ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೀನುಗಾರಿಕೆ ಉಪನಿರ್ದೇಶಕ ಎಮ್.ಎಲ್. ದೊಡ್ಡಮನಿ ನಾಡದೋಣಿ ಮೀನುಗಾರರ ದೋಣಿಯ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಯಾವುದೇ ಮೀನುಗಾರರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವದು. ಬುಧವಾರದಂದು ತಪಾಸಣೆಗೆ ಬಂದ ತಂಡ ಕೆಲವೊಂದು ಕಡೆಗಳಲ್ಲಿ ಪರಿಶೀಲನೆ ಮಾಡದೇ ತೆರಳಿರುವುದು ಮೀನುಗಾರರ ಆಪಾದನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಪಾಸಣೆಯಲ್ಲಿ ಬಿಟ್ಟು ಹೋದ ದೋಣಿಗಳ ಪರಿಶೀಲನೆ ಮತ್ತೆ ಮಾಡಿ ಯೋಗ್ಯವಿದ್ದರೆ ಸೀಮೆಎಣ್ಣೆ ನೀಡುವುದಾಗಿ ತಿಳಿಸಿದ್ದಾರೆ. ಅದೇ ರೀತಿ ಬಂದಂತಹ ಅಧಿಕಾರಿ ಭಟ್ಕಳದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಮಾತನಾಡಿದ್ದರೆ ಈ ಬಗ್ಗೆ ತಿಳುವಳಿಕೆ ಹೇಳಲಾಗುವುದು. ಎಂದರು.

ಬೈಟ್ : ಎಮ್.ಎಲ್. ದೊಡ್ಡಮನಿ.

ಬಳಿಕ ಮೀನುಗಾರಿಕೆ ಉಪನಿರ್ದೇಶಕ ಎಮ್.ಎಲ್. ದೊಡ್ಡಮನಿ ಅವರು ಸ್ವತಃ ಮೀನುಗಾರರೊಂದಿಗೆ ತೆರಳಿ ಮುಂಡಳ್ಳಿ, ಬೆಳಕೆ, ಬೆಳ್ನಿ ತೆರಳಿ ಪರಿಶೀಲನೆ ನಡೆಸಿದ್ದಾರೆ.

ರಾಘವೇಂದ್ರ ಮಲ್ಯ . ಬಟ್ಕಳ.

Related posts

Leave a Reply