Header Ads
Breaking News

ನಾಮದ ಅವಹೇಳನ ಮಾಡಿದವರಿಗೆ ಮತದಾರ ನಾಮ ಹಾಕಿದ್ದಾರೆ : ಸುಳ್ಯದಲ್ಲಿ ಶಾಸಕ ಎಸ್. ಅಂಗಾರ ಲೇವಡಿ

ನಾಮ ಹಾಕಿದವರನ್ನು ಕಂಡರೆ ಭಯವಾಗುತ್ತಿದೆ ಎನ್ನುತ್ತಿದ್ದ ಸಿದ್ದರಾಮಯ್ಯರ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳಿಗೆ ಮತದಾರರು ಸರಿಯಾದ ರೀತಿಯಲ್ಲಿ ನಾಮ ಹಾಕಿದ್ದಾರೆ ಎಂದು ಶಾಸಕ ಎಸ್. ಅಂಗಾರ ಲೇವಡಿ ಮಾಡಿದ್ದಾರೆ ಲೋಕ ಸಮರದಲ್ಲಿ ಬಿಜೆಪಿ ಪ್ರಚಂಡ ವಿಜಯಗಳಿಸಿದ ಹಿನ್ನೆಲೆಯಲ್ಲಿ ಸುಳ್ಯದ ಬಿಜೆಪಿ ಕಚೇರಿಯ ಎದುರು ನಡೆದ ವಿಜಯೋತ್ಸವದಲ್ಲಿ ಮಾತನಾಡಿದ ಅವರು ಧರ್ಮವನ್ನು ಅವಹೇಳನ ಮಾಡುತ್ತಿದ್ದ ಪ್ರತಿಯೊಬ್ಬ ಕಾಂಗ್ರೆಸ್ಸು ನಾಯಕರಿಗೆ ಮತದಾರರು ಬುದ್ದಿ ಕಲಿಸಿದ್ದಾರೆ. ನಾಮದ ಮಹತ್ವ ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಇವತ್ತು ಗೊತ್ತಾಗಿದೆ. ಇದರಿಂದ ೨ ಪಕ್ಷಕ್ಕೂ ನಾಮ ಆಗಿದೆ. ಅತೀ ಹೆಚ್ಚಿನ ಅಂತರದ ಗೆಲುವುಗೆ ಕಾರಣಕರ್ತರಾದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ವಿಜಯೋತ್ಸವದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಹರೀಶ್ ಕಂಜಿಪಿಲಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎ.ವಿ.ತೀರ್ಥರಾಮ, ನವೀನ್ ರೈ ಮೇನಾಲ, ಪಿ,ಕೆ.ಉಮೇಶ್, ನೀವಿನ್ ಸಾರಕೆರೆ, ಉದಯಕುಮಾರ್ ಆಚಾರ್, ದಾಮೋದರ ಮಂಚಿ, ಅಬ್ದುಲ್ ಕುಂಞಿ ನೇಲ್ಯಡ್ಕ, ಗಿರೀಶ್ ಕಲ್ಲುಗದ್ದೆ, ವಿನಯಕುಮಾರ್ ಕಂದಡ್ಕ, ಶಂಕರ ಪೆರಾಜೆ, ವಿನುತಾ ಪಾತಿಕಲ್ಲು, ನಾಗರಾಜ ಮುಳ್ಯ, ಶೀನಪ್ಪ ಬಯಂಬು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *