Header Ads
Breaking News

ನಿಖಿಲ್ ನೋಟಿಗೆ ಸುಮಲತಾ ಓಟು ಪಡೆಯಲಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಉಳ್ಳಾಲ: ಮಂಡ್ಯದಲ್ಲಿ ನಿಖಿಲ್ ನೋಟಿಗೆ ಸುಮಲತಾಗೆ ಓಟು ಪಡೆಯಲಿದ್ದಾರೆ. ಹಣಬಲದ ಮೇಲೆ ಕಾಂಗ್ರೆಸ್-ಜೆಡಿಎಸ್ ಚುನಾವಣೆಯನ್ನು ಎದುರಿಸುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ತೊಕ್ಕೊಟ್ಟು ಕಾಪಿಕಾಡಿನ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಅವರನ್ನು ಸೋಲಿಸಲು ಮುಖ್ಯಮಂತ್ರಿ ವ್ಯಾಪಕವಾಗಿ ಹಣದ ಹೊಳೆ ಹರಿಸುತ್ತಿದ್ದಾರೆ. ಆದರೆ ಮತದಾರರು ನಿಖಿಲ್ ನೋಟಿನ ರಾಜಕೀಯವನ್ನು ಧಿಕ್ಕರಿಸಿ ಸುಮತಾ ಓಟು ಹಾಕಿ ಜಯಗಳಿಸಲಿದ್ದಾರೆ. ಶಿವಮೊಗ್ಗದಲ್ಲಿ ದೇವೇಗೌಡ ಕುಟುಂಬದ ಆಪ್ತ ಹಾಗೂ ಸಂಬಂಧಿ ಪರಮೇಶ್ವರ ಎಂಬಾತನ ಮನೆಯಿಂದ ೬ ಕೋಟಿ ನಗದು ಹಾಗೂ ಕೋಟ್ಯಂತರ ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ತಪ್ಪಿತಸ್ಥ ಪರಮೇಶ್ವರ ಸರಕಾರಿ ಗುತ್ತಿಗೆದಾರರಿಂದ ಹಣ ಸಂಗ್ರಹಿಸಿರುವುದಾಗಿ ಗೊತ್ತಾಗಿದೆ. ಜನತೆ ಮುಂದೆ ಪ್ರಾಮಾಣಿಕರೆಂದು ನಾಟಕವಾಡುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನತೆ ಮುಂದೆ ಕ್ಷಮೆಯಾಚಿಸಬೇಕು ಎಂದರು.
ಸುದ್ಧಿಗೋಷ್ಠಿಯಲ್ಲಿ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ಸತೀಶ್ ಕುಂಪಲ, ಪ್ರಧಾನ ಕಾರ್‍ಯದರ್ಶಿ ಮೋಹನ್ ರಾಜ್ ಕೆ.ಆರ್, ತಾ.ಪಂ ಮಾಜಿ ಸದಸ್ಯೆ ರಾಜೀವಿ ಕೆಂಪುಮಣ್ಣು, ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *