Header Ads
Breaking News

ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ 2015-16ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ 2015-16ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ, ಮೂರನೇ ವರ್ಷದ ಬಿಪಿಟಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಿಬ್ಬಂದಿಯೇತರರ ವತಿಯಿಂದ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭ ದೇರಳಕಟ್ಟೆ ಕ್ಷೇಮ ಆಡಿಟೋರಿಯಂನಲ್ಲಿ ನಡೆಯಿತು.

ಕಣ್ಣೂರು ಎಕೆಜಿ ಮೆಮೋರಿಯಲ್ ಕೋ-ಆಪರೇಟಿವ್ ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಹಾಗೂ ಕೇರಳ ವೈದ್ಯಕೀಯ ವಿಶ್ವವಿದ್ಯಾನಿಲಯಗಳ ಸೆನೆಟ್ ಸದಸ್ಯ ಡಾ.ಕಾಮರಾಜ್ ಬಿ. ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಖುಷಿ, ದು:ಖಗಳ ಸಮ್ಮಿಲನ ಬೀಳ್ಕೊಡುಗೆ ಆಗಿದೆ. ಇಂತಹ ಸನ್ನಿವೇಶವನ್ನು ಅದ್ಧೂರಿಯಾಗಿ ಆಯೋಜಿಸಿದ ಸಂಘಟಕರ ಕಾರ್ಯ ಶ್ಲಾಘನೀಯ. ಆಟೊಗ್ರಾಫ್ ಪಡೆಯುವ ಕಾಲ ಬದಲಾಗಿದೆ. ಮೊಬೈಲ್ ಮೂಲಕವೇ ಪ್ರಪಂಚವನ್ನು ಕೈಗಳಲ್ಲಿ ಕಾಣುವ ಕಾಲಘಟ್ಟದಲ್ಲಿ ಎಲ್ಲರನ್ನೂ ಸ್ನೇಹಿತರನ್ನಾಗಿಸಬಹುದು. ಫಿಸಿಯೋಥೆರಪಿಸ್ಟ್‌ಗಳು ಒಗ್ಗೂಡುವಿಕೆಯಿಂದ ಕಾರ್ಯನಿರ್ವಹಿಸಿದಾಗ ಕಾರ್ಯಕ್ಷೇತ್ರಗಳಲ್ಲಿ ಯಶಸ್ಸು ಕಾಣಲು ಸಾಧ್ಯ. ಹಿಂದೆ ಕೇಂದ್ರ ಸರಕಾರ ಜಾರಿಗೆ ತಂದಿರುವ ನ್ಯಾಷನಲ್ ಅಲೈಡ್ ಹೆಲ್ತ್ ಕೇರ್ ಪಾಲಿಸಿ ಮೂಲಕ ಆರೋಗ್ಯ ಕ್ಷೇತ್ರಗಳಲ್ಲಿ ಬಹಳ ಬದಲಾವಣೆಯಾಗಿದೆ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವವವನ್ನು ಅರಿಯುವುದರ ಜತೆಗೆ ರಾಜಕೀಯ ನೀತಿಗಳ ಜ್ಞಾನವನ್ನು ಫಿಸಿಯೋಥೆರಪಿಸ್ಟ್‌ಗಳು ಹೊಂದುವುದು ಅಗತ್ಯವಾಗಿದೆ ಎಂದರು.

ನಿಟ್ಟೆ ವಿ.ವಿ ಕುಲಸಚಿವೆ ಅಲ್ಕಾ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜ್ಞಾನ, ಕೌಶಲ್ಯವೃದ್ಧಿ, ಸ್ನೇಹ ಸಂಪಾದನೆಯ ತರಬೇತಿಯನ್ನು ಪಡೆದು ಹೊರಹೋಗುತ್ತಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ನಿಟ್ಟೆ ವಿ.ವಿಯ ರಾಯಭಾರಿಯಾಗಿ ಕಾರ್ಯನಿರ್ವಹಿಸಿ. ಈ ಮೂಲಕ ಕಲಿತ ಸಂಸ್ಥೆಗೆ ಗೌರವವನ್ನು ಸಂದಾಯ ಮಾಡಿದಂತಾಗುವುದು ಎಂದರು. 

ವಿದ್ಯಾರ್ಥಿನಿಯರಾದ ಸಂಯುಕ್ತ ಹೆಗ್ಡೆ, ಅನಿತಾ ಪೌಲ್ ಅನುಭವ ಹಂಚಿಕೊಂಡರು. ಈ ಸಂದರ್ಭ ನಿಟ್ಟೆ ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ.ಧಾನೇಶ್ ಕುಮಾರ್. ಉಪನ್ಯಾಸಕ ಪುರುಷೋತ್ತಮ್ ಸಿಪ್ಲಾ ಡಾ. ಸುಚೇತಾ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *