Header Ads
Breaking News

ನಿಯಂತ್ರಣ ತಪ್ಪಿದ ಕಾರು ಅಂಗಡಿಗೆ ನುಗ್ಗಿ ಹಾನಿ

ಮಂಜೇಶ್ವರ: ಕಾರು ಚಾಲಕನ ನಿಯಂತ್ರಣ ತಪ್ಪಿಡಾ ಕಾರೊಂದು ಅಂಗಡಿಯೊಳಗೆ ನುಗ್ಗಿ ಹಾನಿಯನ್ನುಂಟು ಮಾಡಿದೆ. ಈ ಸಂದರ್ಭ ಅದೃಷ್ಟವಶಾತ್ ಅಂಗಡಿಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಕುಂಜತ್ತೂರು ಜಂಕ್ಷನಿನಲ್ಲಿ ಈ ಘಟನೆ ನಡೆದಿದೆ. ಕೇರಳ ವಿದ್ಯುತ್ ಇಲಾಖೆಯಲ್ಲಿರುವ ಉದ್ಯೋಗಿಯಾಗಿರುವ ಗೋಪಾಲ ಎಂಬಾತ ಚಲಾಯಿಸಿದ ಕಾರು ಅಪಘಾತಕ್ಕೀಡಾಗಿದೆ. ಕಾರು ನುಗ್ಗಿದ ರಭಸಕ್ಕೆ ಹಸೈನಾರ್ ಹಾಗೂ ಅಬ್ದುಲ್ಲ ಎಂಬಿವರ ಮಾಲಕತ್ವದಲ್ಲಿರುವ ಅಂಗಡಿಗಳಿಗೆ ಹಾನಿಯುಂಟಾಗಿದೆ. ಬಳಿಕ ಊರವರು ನೀಡಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸ್ರು ಆಗಮಿಸಿ ಚಾಲಕನನ್ನು ವಶಕ್ಕೆ ತೆಗೆದಿದ್ದಾರೆ. ಕಾರಿನಲ್ಲೂ ಮದ್ಯದ ಬಾಟ್ಲಿ ಇತ್ತೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *