Header Ads
Header Ads
Breaking News

ನಿರ್ಮಿಲ್ಲೆಂದ ನೀರ್ಮೋಣೆಂ ಕೊಂಕಣಿ ಚಲನಚಿತ್ರ : ಧ್ವನಿ ಸುರುಳಿ ಬಿಡುಗಡೆ ಸಮಾರಂಭ

ಪ್ರೇಸ್ಟನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಹೆನ್ರಿ ಡಿ ಸಿಲ್ವಾ ಸುರತ್ಕಲ್ ನಿರ್ಮಿಸಿರುವ ನಿರ್ಮಿಲ್ಲೆಂ ನಿರ್ಮೋಣೆಂ ಕೊಂಕಣಿ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವು ಜುಲೈ 14ರಂದು ಬೆಂದೂರ್‌ವೆಲ್‌ನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ಮಿನಿ ಹಾಲ್‌ನಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಮೆಲ್ವಿನ್ ತಿಳಿಸಿದರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿರ್ಮಿಲ್ಲೆಂ ನಿರ್ಮೋಣೆಂ ಕೊಂಕಣಿ ಚಲನಚಿತ್ರಕ್ಕೆ ಒಂದೇ ಹಂತದಲ್ಲಿ42ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಬೆಂಗಳೂರು, ಮರವಂತೆ, ಕುಂದಾಪುರ, ಉಡುಪಿ, ಕಾರ್ಕಳ ಹಾಗೂ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸಿನಿಮಾದ ಕತೆ ಹೆನ್ರಿ ಡಿ ಸಿಲ್ವಾ ಅವರದ್ದಾಗಿದ್ದು, ಸಿನಿಮಾವನ್ನು ಅವರೇ ನಿರ್ಮಿಸಿದ್ದಾರೆ. ಚಿತ್ರಕತೆ ಮತ್ತು ಸಹ ನಿರ್ದೇಶಕರಾಗಿ ನೋಬರ್ಟ್ ಜೋನ್ ಡಿ ಸೋಜಾ ಕೆಲಸ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಚಿತ್ರದ ಕಲಾವಿದರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *