Header Ads
Header Ads
Header Ads
Header Ads
Header Ads
Header Ads
Breaking News

ನಿರ್ಮಿಲ್ಲೆಂ ನಿರ್ಮೋಣೆಂ 25 ದಿನಗಳತ್ತ ಮುನ್ನುಗ್ಗಿದ ಕೊಂಕಣಿ ಚಿತ್ರ

ಸಿನಿಮಾ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳಿಂದ ತಯಾರಾದ ಯುವಕರ ಚಲನಚಿತ್ರ ನಿರ್ಮಿಲ್ಲೆಂ ನಿರ್ಮೋಣೆಂ ಈ ಸಿನಿಮಾ ಎಲ್ಲಾ ಪ್ರೇಕ್ಷಕರನ್ನು ಮೋಡಿಮಾಡಿದೆ. ಇದೊಂದು ಮ್ಯೂಸಿಕಲ್ ಲವ್‌ಸಿನಿಮಾವಾಗಿದ್ದು, ಮಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಹಾಗೂ ಮೂಡಬಿದ್ರೆ, ಕಾರ್ಕಳದಲ್ಲಿ ತೆರೆಕಂಡು 25ನೇ ದಿನದತ್ತ ಮುನ್ನುಗ್ಗಿದೆ ಎಂದು ಚಿತ್ರತಂಡದವರು ಮಾಹಿತಿ ನೀಡಿದ್ರು.
ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿದ ಪ್ರೀತಮ್ ಇದೇ ತಿಂಗಳ 13ರಂದು ಮಣಿಪಾಲದ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ತೆರೆಕಾಣಲಿದ್ದು ಚಲನಚಿತ್ರದ ಬೇಡಿಕೆಯ ಮೇರೆಗೆ ಅಕ್ಟೋಬರ್ 2ರಂದು ಕಾಸರಗೋಡಿನ ಚಿತ್ರಮಂದಿರದಲ್ಲಿ ತೆರೆಕಾಣಲಿದೆ ಹಾಗೂ ಸುರತ್ಕಲ್‌ನ ಚಿತ್ರಮಂದಿರದಲ್ಲಿ ತೆರೆಕಾಣುವ ಸಂಭವವಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರಾದ ಹೆನ್ರಿ ಡಿಸಿಲ್ವಾ, ಚಿತ್ರದ ನಿರ್ದೇಶಕ ಮೆಲ್ವಿನ್ ಎಲ್ವೆಲ್, ಪ್ರತಾಪ್ ಮಿನೇಜಸ್, ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *