Header Ads
Breaking News

ನಿಲ್ಲಿಸಿದ್ದ ಬಸ್ ಎಗರಿಸಿದ ಭೂಪ : ಯುವಕನ ಸಹಿತ ಬಸ್ ಪೊಲೀಸರ ವಶಕ್ಕೆ

ಕಾರು, ಬೈಕ್, ಕಾರು, ಆಟೋ ರಿಕ್ಷಾಗಳನ್ನು ಎಗರಿಸುವ ಭೂಪರಿದ್ದಾರೆ. ಇನ್ನು ಸಿಟಿ ಬಸ್ಸುಗಳು ಪ್ರಯಾಣಿಕರಿಂದ ತುಂಬಿದ್ದಾಗ ಬಸ್ಸಿನಲ್ಲಿ ಪರ್ಸ್, ಆಭರಣ ಸೇರಿದಂತೆ ಪ್ರಯಾಣಿಕರ ವಸ್ತುಗಳನ್ನು ಎಗರಿಸುವ ಕಳ್ಳರೂ ಇದ್ದಾರೆ, ಆದರೆ ಇಲ್ಲೊಬ್ಬ ಭೂಪ ಬಸ್ಸನ್ನೇ ಎಗರಿಸಿ ಕೊಂಡೊಯ್ಯುವ ಮೂಲಕ ಬಸ್ ಮಾಲಕರನ್ನೇ ಬೆಚ್ಚಿಬೀಳಿಸಿದ್ದಾನೆ. ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಎಆರ್ ಟ್ರಾವಲ್ಸ್ ಹೆಸರಿರುವ 44ಸಿ ನಂಬರ್ ನ ಬಸ್ಸು ನಾಪತ್ತೆಯಾಗಿತ್ತು. ದಿನನಿತ್ಯ ಸ್ಟೇಟ್ ಬ್ಯಾಂಕ್-ಉಳ್ಳಾಲದ ನಡುವೆ ಓಡಾಡುವ ಸಿಟಿ ಬಸ್ಸನ್ನ ನಿಫಾಝ್ ಎಂಬಾತ ಉಳ್ಳಾಲದಿಂದ ನಿನ್ನೆ ರಾತ್ರಿ ಚಲಾಯಿಸಿಕೊಂಡು ಉಡುಪಿಗೆ ಬಂದಿದ್ದ. ಮಂಗಳೂರಿನ ಬಸ್ಸು ಉಡುಪಿಯಲ್ಲಿ ಖಾಲಿಯಾಗಿ ಓಡಾಡುತ್ತಿರುವುದನ್ನ ಕಂಡ ಸಾರ್ವಜನಿಕರಲ್ಲೊಬ್ಬರು ಬಸ್ಸನ್ನ ತಡೆದು ಉಳ್ಳಾಲದ ಪರಿಚಯಸ್ಥರಿಗೆ ಮಾಹಿತಿ ನೀಡಿದ್ದಾರೆ. ಆಗ ಗೊತ್ತಾಗಿದ್ದೆ ಉಳ್ಳಾಲದಲ್ಲಿ ಬಸ್ಸು ಎಗರಿಸಿದ್ದ ಪ್ರಕರಣ. ಕೂಡಲೇ ಉಳ್ಳಾಲದ ಪೊಲೀಸರ ಮೂಲಕ ಬಸ್ಸು ಮಾಲಕರು ಉಡುಪಿಗೆ ಬಂದು ಬಸ್ಸು ಕದ್ದ ಯುವಕನ ಸಹಿತ ಬಸ್ಸನ್ನ ಉಳ್ಳಾಲಕ್ಕೆ ಕೊಂಡೊಯ್ದಿದ್ದಾರೆ ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *