Header Ads
Breaking News

ನಿವೃತ್ತ ಪ್ರಾಂಶುಪಾಲರ ಮನೆಯಲ್ಲಿ ಕಳ್ಳತನ: ಕಾರ್ಕಳ ಸಾಣೂರಿನ ಕುಂಟಲ್ಪಾಡಿಯಲ್ಲಿ ಘಟನೆ

ಕಾರ್ಕಳ ಸಾಣೂರು ಗ್ರಾಮದ ಕುಂಟಲ್ಪಾಡಿ ಎಂಬಲ್ಲಿ ನಿವೃತ್ತ ಪ್ರಾಂಶುಪಾಲರಾದ ಇಂದಿರಾ ರವರ ಮನೆಯಲ್ಲಿ ಇಂದು ಮುಂಜಾನೆ ಕಳ್ಳರು ಮನೆಯ ಮುಂಬಾಗಿಲನ್ನು ಮುರಿದು ಮನೆಯ ಕೋಣೆಯಲ್ಲಿದ್ದ ೪ ಕಪಾಟುಗಳನ್ನು ಜಾರಿಸಿ ಏನು ಸಿಗದೆ ಬರಿಗೈಯಲ್ಲಿ ವಾಪಸ್ ಆದ ಘಟನೆ ನಡೆದಿದೆ. ಈ ಸಂದರ್ಭದಲ್ಲಿಕಪಾಟಿನೊಳ ಒಳಗಿದ್ದ ನಕಲಿ ಬಂಗಾರದ ಒಡವೆಗಳನ್ನು ಅಲ್ಲೇ ಬಿಸಾಡಿ ಹೋಗಿರುತ್ತಾರೆ. ಮನೆಯ ಮಾಲೀಕರು ಕೆಲವು ದಿನಗಳ ಹಿಂದೆ ಸೇವೆಯಿಂದ ನಿವೃತ್ತಿ ಕೊಂಡಿದ್ದರೆ ಕೊಂಡಿದ್ದರು. ಅವರು ಮೂರು ದಿನಗಳ ಹಿಂದೆ ವೈಷ್ಣೋದೇವಿ ದೇವಸ್ಥಾನಕ್ಕೆತೀರ್ಥಯಾತ್ರೆಗೆ ಹೋಗಿರುತ್ತಾರೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *