Header Ads
Header Ads
Header Ads
Breaking News

ನಿಷೇಧಿತ ತಂಬಾಕು ಪತ್ತೆ ಅನಧಿಕೃತವಾಗಿ ಶೇಖರಿಸಿಡಲಾಗಿದ್ದ 27,000 ಪ್ಯಾಕೆಟ್ ಪತ್ತೆ ಮಂಜೇಶ್ವರ ವಿದ್ಯಾನಗರ ಪೊಲೀಸರು ದಾಳಿ

ಮಿಲ್ಮಾ ಬೂತ್ ಮಾಲಕನ ಮನೆಯಲ್ಲಿ ಅನಧಿಕೃತವಾಗಿ ಶೇಖರಿಸಿಡಲಾಗಿದ್ದ 27,000 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ತೆಗೆದು ಕೊಂಡಿದ್ದಾರೆ. ಈ ಸಂಬಂಧ ಚೆರ್ಕಳ ಪರಿಸರವಾಸಿ ಮೊಯ್ದು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ವಿದ್ಯಾನಗರ ಪೊಲೀಸರು ದಾಳಿ ನಡೆಸಿದ್ದಾರೆ.

ಮನೆಯೊಳಗಿನ ಒಂದು ಕೊಠಡಿ ಹಾಗೂ ಸ್ನಾನದ ಕೊಠಡಿಯಲ್ಲಿ ನಿಷೇಧಿತ ಉತ್ಪನ್ನಗಳನ್ನು ಬಚ್ಚಿಡಲಾಗಿತ್ತು. ಈ ಉತ್ಪನ್ನಗಳನ್ನು ಮಿಲ್ಮಾ ಬೂತ್ ನಲ್ಲಿ ಮಾರಾಟ ನಡೆಸುತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಹೆಚ್ಚಿನ ಗ್ರಾಹಕರು ಅನ್ಯ ರಾಜ್ಯದಿಂದ ಬಂದಿರುವ ಕಾರ್ಮಿಕರು ಎಂಬುದಾಗಿ ಆರೋಪಿ ತನಿಖಾ ವೇಳೆ ತಿಳಿಸಿರುವುದಾಗಿ ಠಾಣಾಧಿಕಾರಿ 4 ನ್ಯೂಸ್ ಗೆ ತಿಳಿಸಿದ್ದಾರೆ.

Related posts

Leave a Reply