Header Ads
Breaking News

ನೀರು ಸಾಗಾಟ ವಾಹನಕ್ಕೆ ಸ್ಕೂಟರ್ ಢಿಕ್ಕಿ- ಕಾಂಜರಕಟ್ಟೆಯಲ್ಲಿ ನಡೆದ ಘಟನೆ

ಪಡು : ಪಡುಬಿದ್ರಿ ವ್ಯಾಪ್ತಿಯ ಕಾಂಜರಕಟ್ಟೆ ಎಂಬಲ್ಲಿ ನಿಂತಿದ್ದ ಟ್ಯಾಕ್ಟರ್‌ಗೆ ದ್ವಿಚಕ್ರ ವಾಹನ ಢಿಕ್ಕಿಯಾದ ಘಟನೆ ನಡೆದಿದೆ. ದ್ವಿಚಕ್ರ ವಾಹದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಡಿಗೆ ಸ್ಕೂಟರ್‌ನಲ್ಲಿ ಕಾರ್ಕಳದ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳೀಯರಾದ ಕೆ.ಸಿ. ಕಾಮತ್ ಎಂಬವರಿಗೆ ಸೇರಿದ ಟ್ಯಾಕ್ಟರ್‌ಗೆ ಸ್ಕೂಟರ್ ಢಿಕ್ಕಿಯಾಗಿದೆ. ಕಲ್ಕತ್ತ ಮೂಲದ ಗೋಪಿ ಮತ್ತು ರಂಜನ್ ಗಾಯಾಳುಗಳಾಗಿದ್ದು, ಗೋಪಿ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಪಟ್ರೋಲ್ ವಾಹನ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Related posts

Leave a Reply

Your email address will not be published. Required fields are marked *