Header Ads
Header Ads
Header Ads
Breaking News

ನೀರ್ಕೆರೆ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಹಬ್ಬ : ಹಲವು ಸಂಘಟನೆಗಳ ವತಿಯಿಂದ ಕಾರ್ಯಕ್ರಮ ಆಯೋಜನೆ

ಮೂಡುಬಿದಿರೆ : ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಆವಿಷ್ಕಾರ ಮತ್ತು ಚಿಂತನೆಗಳನ್ನು ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮತ್ತು ಹೊಸ ಹೊಸ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕೆನ್ನುವ ನಿಟ್ಟಿನಲ್ಲಿ ಕಲ್ಲಮುಂಡ್ಕೂರು ಕ್ಲಸ್ಟರ್‌ನ ಸ.ಹಿ.ಪ್ರಾ.ಶಾಲೆ ನೀರ್ಕೆರೆಯಲ್ಲಿ “ಮಕ್ಕಳ ವಿಜ್ಞಾನ ಹಬ್ಬ”ವನ್ನು ಸೋಮವಾರ ಆಯೋಜಿಸಲಾಗಿತ್ತು. 

ಮೂಡುಬಿದಿರೆ ಕ್ಷೇತ್ರಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿಯವರ ಕಚೇರಿ ಹಾಗೂ ಸರ್ವ ಶಿಕ್ಷಣ ಅಭಿಯಾನ 2019-20ರ ಅನ್ವಯ, ನೀರ್ಕೆರೆ ಸ. ಹಿ.ಪ್ರಾ. ಶಾಲೆಯಲ್ಲಿ ಕಲ್ಲಮುಂಡ್ಕೂರು ಕ್ಲಸ್ಟರ್‌ನ ಮೂರು ಶಾಲೆಗಳ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ಮಕ್ಕಳ ವಿಜ್ಞಾನ ಹಬ್ಬವು ನಡೆಯಲಿದೆ. ವಿದ್ಯಾರ್ಥಿಗಳ ೫ ತಂಡಗಳು ವಿವಿಧ ಚಟುವಟಿಕೆಗಳ್ಲಿ ತೊಡಗಿಸಿಕೊಳ್ಳಲಿವೆ. ಕಾಗದ ಕತ್ತರಿ, ಊರು ಸುತ್ತೋಣ, ಹಾಡು-ಆಡು, ಮಾಡು-ಹಾಡು, ಚುಕ್ಕಿ ಚಂದ್ರಮ (ಖಗೋಳ ವಿಜ್ಞಾನ)ವನ್ನು ಅರಿತುಕೊಂಡರು. ಕಲ್ಲಮುಂಡ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೀರ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರು ವಿದ್ಯಾರ್ಥಿಗಳು ವಿಜ್ಞಾನ, ಕ್ರಾಫ್ಟ್‌ಗಳನ್ನು ಪ್ರದರ್ಶಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲ್ಲಮುಂಡ್ಕೂರು ಕ್ಲಸ್ಟರ್ ಮಟ್ಟದ ಮಕ್ಕಳ ಈ ವಿಜ್ಞಾನ ಹಬ್ಬವನ್ನು ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ಎಂ. ಎಸ್. ಉದ್ಘಾಟಿಸಿದರು. ಮುಖ್ಯಅತಿಥಿಗಳಾಗಿ ಪಿಡಿಓ ಭಾಗ್ಯಲಕ್ಷ್ಮೀ, ಸಿಆರ್‌ಪಿ ಗೋಪಾಲ್ ಟಿ., ಸರೋಜಾ ಬಾ, ಬಿಆರ್‌ಸಿ ವಿನುತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನಾಗೇಶ್, ನೀರ್ಕೆರೆ ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕ ಕರುಣಾಕರ, ಎಸ್‌ಡಿಎಂಸಿ ಅಧ್ಯಕ್ಷ ಶಶಿಕಾಂತ ಮತ್ತಿತರರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *